ತಮಿಳುನಾಡಿನ ತೂತುಕುಡಿ ಜಿಲ್ಲೆಯ ಪಾಂಚಾಲಕುರಿಚ್ಚಿಯಲ್ಲಿ ಜಗವೀರ ಕಟ್ಟಬೊಮ್ಮನ್ ಹಾಗು ಆರ್ಮುಗಟ್ಟಮ್ಮಾಳ್ ದಂಪತಿಗಳಿಗೆ ಮೊದಲ ಮಗನಾಗಿ ವೀರಪಾಂಡ್ಯ ಕಟ್ಟಬೊಮ್ಮನ್ ಜನವರಿ ೩, ೧೭೬೦ ರಂದು ಜನಿಸಿದ. ಫೆಬ್ರವರಿ ೨, ೧೭೯೦ ರಲ್ಲಿ ಪಾಂಚಾಲಕುರಿಚ್ಚಿಯ ಪಾಳೇಗಾರನಾಗಿ ಅಧಿಕಾರವಹಿಕೊಳ್ಳುತ್ತಾನೆ. ಭಾರತ ನೆಲದಲ್ಲಿ ಪರಕೀಯರಿಂದ ನಡೆಯುತ್ತಿದ್ದ ದಾಳಿ, ದಬ್ಬಾಳಿಕೆಗಳು ಕಟ್ಟಬೊಮ್ಮನ್ ಅವರ ನಿದ್ದೆಗೆಡಿಸಿದ್ದವು. ನಮ್ಮ ನೆಲದಲ್ಲಿ ನಾವು ಸ್ವಾತಂತ್ರ್ಯರಾಗಿರಲು ಬ್ರಿಟೀಷರ ಅಪ್ಪಣೆ ಸಲ್ಲದು ಎಂಬ ನಿಲುವಿಗೆ ಬಂದಿದ್ದ ಕಟ್ಟಬೊಮ್ಮನ್ ಬಹಿರಂಗವಾಗಿ ಬ್ರಿಟಿಷ್ ಚಕ್ರಾಧಿಪತ್ಯವನ್ನು ವಿರೋಧಿಸಿದ ಪ್ರಥಮ ಸ್ವಾತಂತ್ರ್ಯ ಸೇನಾನಿ.
ತಮಿಳುನಾಡಿನ ತೂತುಕುಡಿ ಜಿಲ್ಲೆಯ ಪಾಂಚಾಲಕುರಿಚ್ಚಿಯಲ್ಲಿ ಜಗವೀರ ಕಟ್ಟಬೊಮ್ಮನ್ ಹಾಗು ಆರ್ಮುಗಟ್ಟಮ್ಮಾಳ್ ದಂಪತಿಗಳಿಗೆ ಮೊದಲ ಮಗನಾಗಿ ವೀರಪಾಂಡ್ಯ ಕಟ್ಟಬೊಮ್ಮನ್ ಜನವರಿ ೩, ೧೭೬೦ ರಂದು ಜನಿಸಿದ. ಫೆಬ್ರವರಿ ೨, ೧೭೯೦ ರಲ್ಲಿ ಪಾಂಚಾಲಕುರಿಚ್ಚಿಯ ಪಾಳೇಗಾರನಾಗಿ ಅಧಿಕಾರವಹಿಕೊಳ್ಳುತ್ತಾನೆ. ಭಾರತ ನೆಲದಲ್ಲಿ ಪರಕೀಯರಿಂದ ನಡೆಯುತ್ತಿದ್ದ ದಾಳಿ, ದಬ್ಬಾಳಿಕೆಗಳು ಕಟ್ಟಬೊಮ್ಮನ್ ಅವರ ನಿದ್ದೆಗೆಡಿಸಿದ್ದವು. ನಮ್ಮ ನೆಲದಲ್ಲಿ ನಾವು ಸ್ವಾತಂತ್ರ್ಯರಾಗಿರಲು ಬ್ರಿಟೀಷರ ಅಪ್ಪಣೆ ಸಲ್ಲದು ಎಂಬ ನಿಲುವಿಗೆ ಬಂದಿದ್ದ ಕಟ್ಟಬೊಮ್ಮನ್ ಬಹಿರಂಗವಾಗಿ ಬ್ರಿಟಿಷ್ ಚಕ್ರಾಧಿಪತ್ಯವನ್ನು ವಿರೋಧಿಸಿದ ಪ್ರಥಮ ಸ್ವಾತಂತ್ರ್ಯ ಸೇನಾನಿ. ೧೭೯೯ ರ ಅಕ್ಟೋಬರ್ ೧ ರಂದು ಪುದುಕೊಟ್ಟೈ ಸಂಸ್ಥಾನದ ರಾಜ ವಿಜಯ ರಘುನಾಥ ತೊಂಡೈಮಂ ಕಟ್ಟಬೊಮ್ಮನ್ ಗೆ ದ್ರೋಹವೆಸಗಿ ಬ್ರಿಟಿಷರಿಗೆ ಹಿಡಿದು ಕೊಡಲು ಸಹಕರಿಸಿದನು. ಕಾಯಾಥಾರ್ ನಲ್ಲಿ ಬಂಧಿಸಿದ ಬ್ರಿಟೀಷರು ವಿಚಾರಣೆಗೆ ಒಳಪಡಿಸಿ ನಂತರ ಸಾರ್ವಜನಿಕವಾಗಿ ಗಲ್ಲಿಗೇರುವಂತೆ ಶಿಕ್ಷೆ ನೀಡಿದರು. ಅಪ್ರತಿಮ ವೀರ, ತಮಿಳು ನೆಲದಲ್ಲಿ ಸ್ವಾತಂತ್ರ್ಯ ಕಿಡಿ ಹೊತ್ತಿಸಿದ ಕಟ್ಟಬೊಮ್ಮನ್ ನನ್ನು ಅದೇ ದಿನ ಕಾಯಾಥಾರ್ ನಲ್ಲಿ ನೇಣಿಗೇರಿಸಲಾಯಿತು. ಸ್ವಾತಂತ್ರ್ಯ ಸೇನಾನಿಯ ಜ್ಞಾಪಕಾರ್ಥವಾಗಿ ಪಾಂಚಾಲಕುರಿಚ್ಚಿಯಲ್ಲಿ ವೀರಪಾಂಡ್ಯನ್ ಕಟ್ಟಬೊಮ್ಮನ್ ಪರ್ವವನ್ನು ಆಚರಿಸಲಾಗುತ್ತದೆ.
ಸಹಕಾರ ಪಿತಾಮಹ ಎಂಬ ಬಿರುದಿನ ಶ್ರೀ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ್ ಇವರು, ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ 1843 ರಲ್ಲಿ ಜನಿಸಿದರು. 1905 ಜುಲೈ 8 ರಂದು ಏಷ್ಯಾ ಖಂಡದಲ್ಲೇ ಪ್ರಪ್ರಥಮ ಸಹಕಾರಿ ಸಂಘ ಸ್ಥಾಪಿಸಿದರು. ಸ್ಥಾಪನೆಯಾದಾಗ ಜಮಾ ಆದ ಎರಡು ಸಾವಿರ ರೂಪಾಯಿಗಳನ್ನು ಗ್ರಾಮದಲ್ಲಿ ರೈಲ್ವೆ ನಿಲ್ದಾಣವನ್ನು ನಿರ್ಮಿಸಲು ಹಾಗೂ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ಬಳಸಲಾಯಿತು. 1933 ರಲ್ಲಿ ದೈವಾಧೀನರಾದರು.
ಸಹಕಾರ ಪಿತಾಮಹ ಎಂಬ ಬಿರುದಿನ ಶ್ರೀ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ್ ಇವರು, ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ 1843 ರಲ್ಲಿ ಜನಿಸಿದರು. 1905 ಜುಲೈ 8 ರಂದು ಏಷ್ಯಾ ಖಂಡದಲ್ಲೇ ಪ್ರಪ್ರಥಮ ಸಹಕಾರಿ ಸಂಘ ಸ್ಥಾಪಿಸಿದರು. ಸ್ಥಾಪನೆಯಾದಾಗ ಜಮಾ ಆದ ಎರಡು ಸಾವಿರ ರೂಪಾಯಿಗಳನ್ನು ಗ್ರಾಮದಲ್ಲಿ ರೈಲ್ವೆ ನಿಲ್ದಾಣವನ್ನು ನಿರ್ಮಿಸಲು ಹಾಗೂ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ಬಳಸಲಾಯಿತು. 1933 ರಲ್ಲಿ ದೈವಾಧೀನರಾದರು.
ಕಾಳಿದಾಸನನ್ನು ಜಗತ್ತಿನ ಶ್ರೇಷ್ಠ ಕವಿ ಎಂದು ಗುರುತಿಸಲಾಗಿದೆ. ಇವರ ಕಾಲವನ್ನು ಕ್ರಿಸ್ತಪೂರ್ವ ಎರಡನೇ ಶತಮಾನದ ನಂತರದವನೂ, ನಾಲ್ಕನೇ ಶತಮಾನಕ್ಕಿಂತ ಹಿಂದಿನವನು ಎಂದು ಹೇಳಲಾಗುತ್ತದೆ.
ಕಾಳಿದಾಸನನ್ನು ಜಗತ್ತಿನ ಶ್ರೇಷ್ಠ ಕವಿ ಎಂದು ಗುರುತಿಸಲಾಗಿದೆ. ಇವರ ಕಾಲವನ್ನು ಕ್ರಿಸ್ತಪೂರ್ವ ಎರಡನೇ ಶತಮಾನದ ನಂತರದವನೂ, ನಾಲ್ಕನೇ ಶತಮಾನಕ್ಕಿಂತ ಹಿಂದಿನವನು ಎಂದು ಹೇಳಲಾಗುತ್ತದೆ. ವಿಕ್ರಮನೆಂಬ ರಾಜನ ಆಸ್ಥಾನದಲ್ಲಿ ಇದ್ದ ನವಕವಿಗಳಲ್ಲಿ ಕಾಳಿದಾಸನು ಒಬ್ಬನು. ಕುರುಬ ಸಮುದಾಯದ ಒಬ್ಬ ಸಾಮಾನ್ಯ ಕುರಿಗಾರನೊಬ್ಬನು ಮಹಾಸಾಧಕನಾಗಿ ಕಾಳೀದೇವಿಯ ದರ್ಶನ ಮತ್ತು ಆಶೀರ್ವಾದವನ್ನು ಪಡೆದವನೆಂದು ಹೇಳಲಾಗುತ್ತದೆ. ಕಾಳಿದಾಸನು ರಘುವಂಶ, ಕುಮಾರಸಂಭವ ಎಂಬ ಎರಡು ಮಹಾಕಾವ್ಯಗಳನ್ನು, ಮೇಘದೂತ, ಋತುಸಂಹಾರ ಎಂಬ ಎರಡು ಖಂಡಕಾವ್ಯಗಳನ್ನು ಮತ್ತು ಅಭಿಜ್ಞಾನ ಶಾಕುಂತಲ, ಮಾಲವಿಕಾಗ್ನಿಮಿತ್ರ, ವಿಕ್ರಮೋರ್ವಶೀಯ ಎಂಬ ಮೂರು ನಾಟಕಗಳನ್ನು ರಚಿಸಿದ್ದಾರೆ. ಎಲ್ಲಾ ಕೃತಿಗಳು ಜಗತ್ಪ್ರಸಿದ್ಧಿಯನ್ನು ಪಡೆದಿದ್ದು ಅಭಿಜ್ಞಾನ ಶಾಕುಂತಲ ನಾಟಕವು ಅತ್ಯಂತ ಹೆಚ್ಚು ಭಾಷೆಗಳಲ್ಲಿ ಭಾಷಾಂತರಗೊಂಡ ನಾಟಕವಾಗಿದೆ. ಮೋಡಗಳನ್ನು ದೂತರನ್ನಾಗಿ ಬಳಸಿಕೊಂಡ ಕಾವ್ಯ ಶೈಲಿ ಅತ್ಯಂತ ಮನೋಹರವಾಗಿದೆ. ಸಂಸ್ಕೃತ ಭಾಷೆಯ ಮೇಲಿನ ಹಿಡಿತ ಮತ್ತು ರಚನಾ ಕೌಶಲ್ಯದ ಹಿನ್ನೆಲೆಯಲ್ಲಿ, ಕಾಳಿದಾಸನಿಗೆ ಸಮನಾದ ಕವಿ ಯಾರು ಇಲ್ಲ ಎಂಬ ಹೆಗ್ಗಳಿಗೆ ಪಡೆದಿದ್ದಾನೆ.
ಸಿಂದಗಿ: ತಾಲೂಕಿನ ಗೋಲಗೇರಿ ಅಂದಾಜು 800 ವರ್ಷಗಳ ಪೌರಾಣಿಕ ಇತಿಹಾಸ ಹೊಂದಿದ ಗ್ರಾಮ. ಹಿಂದೆ ಲಿಂಗಯ್ಯನಪುರ ಎಂದು ಕರೆಯಲಾಗುತ್ತಿದ್ದ ಈ ಗ್ರಾಮದ ಪಕ್ಕದ ಢವಳಾರ ಗ್ರಾಮದಲ್ಲಿ ಕುರುಬ ಸಮಾಜದ ಕುಟುಂಬವೊಂದು ವಾಸವಾಗಿತ್ತು.
ಸಿಂದಗಿ: ತಾಲೂಕಿನ ಗೋಲಗೇರಿ ಅಂದಾಜು 800 ವರ್ಷಗಳ ಪೌರಾಣಿಕ ಇತಿಹಾಸ ಹೊಂದಿದ ಗ್ರಾಮ. ಹಿಂದೆ ಲಿಂಗಯ್ಯನಪುರ ಎಂದು ಕರೆಯಲಾಗುತ್ತಿದ್ದ ಈ ಗ್ರಾಮದ ಪಕ್ಕದ ಢವಳಾರ ಗ್ರಾಮದಲ್ಲಿ ಕುರುಬ ಸಮಾಜದ ಕುಟುಂಬವೊಂದು ವಾಸವಾಗಿತ್ತು. ಈ ಕುಟುಂಬದಲ್ಲಿ ಜನಿಸಿದ ಗೊಲ್ಲಾಳನೆಂಬ ಭಕ್ತನಿಗೆ ಶಿವ ಪ್ರಸನ್ನನಾದ ಎಂಬ ಕಥೆ ಕೇಳಿಬರುತ್ತದೆ. ನಂತರ ಇಲ್ಲಿ ಶಿವ ಹಾಗೂ ಭಕ್ತನೇ ದೈವವಾಗಿ ಗೊಲ್ಲಾಳೇಶ್ವರ ಎಂಬ ನಾಮದಿಂದ ಶಿವಭಕ್ತ ಪರಂಪರೆ ಬೆಳೆದುಬಂದದ್ದು ಇತಿಹಾಸ. ಢವಳಾರ ಗ್ರಾಮದ ಬಲ್ಲುಗ ದುಗ್ಗಳಾದೇವಿ ಎಂಬ ಕುರುಬ ಕುಟುಂಬದಲ್ಲಿ ಜನಿಸಿದ ಗೊಲ್ಲಾಳ ಕುಲವೃತ್ತಿಯಂತೆ ಕುರಿ ಕಾಯುತ್ತಿದ್ದ. ಸದಾ ಶಿವ ಧ್ಯಾನ ನಡೆಸುತ್ತಿದ್ದ ಈತ ಶಿವಲಿಂಗವೇ ಸಾಕ್ಷಾತ್ ಶಿವ ಎಂದು ನಂಬಿದ್ದ. ಪ್ರತಿ ವರ್ಷ ಚೈತ್ರಮಾಸದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದರ್ಶನಕ್ಕಾಗಿ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಭಕ್ತರು ಹಾಗೂ ಕಂಬಿ ಸ್ವಾಮಿಗಳನ್ನು ಕಂಡು ಭಾವುಕನಾದ ಗೊಲ್ಲಾಳನು ನಂದಯ್ಯನೆಂಬ ಸ್ವಾಮಿಗಳನ್ನು ಕಂಡು ತನ್ನ ಬಳಿ ಇದ್ದ ಹೊನ್ನಿನ ನಾಣ್ಯ ನೀಡಿ ಶ್ರೀಶೈಲದಿಂದ ಬರುವಾಗ ಶಿವಲಿಂಗ ತರುವಂತೆ ಕೇಳಿಕೊಂಡ.
ಸಂತ ಬಾಳುಮಾಮ ಅವರು ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಕ್ಕೋಲ್ ಎಂಬ ಗ್ರಾಮದಲ್ಲಿ 1892 ರಲ್ಲಿ ಜನಿಸಿದರು. ತಂದೆ ಮಾಯಪ್ಪ ಮತ್ತು ತಾಯಿ ಸತ್ಯವ್ವ. ಶಾಂತ ಹುಡುಗನಾಗಿ ಯಾವಾಗಲೂ ಧ್ಯಾನ ಮಾಡುತ್ತಿದ್ದನು. ತನ್ನ ಸಹೋದರಿಯೊಂದಿಗೆ ವಾಸಿಸುತ್ತಿದ್ದ ಅವರಿಗೆ ಇಚ್ಛೆಯ ವಿರುದ್ಧವಾಗಿ ಅವಳ ಮಗಳನ್ನು ಮದುವೆ ಮಾಡಿದರು. ಮದುವೆಯ ಜೀವನ ಹೆಚ್ಚು ಕಾಲ ಉಳಿಯಲಿಲ್ಲ. ಸಂಬಂಧಿಕರಿಂದ ಸುಮಾರು 15 ಕುರಿಗಳನ್ನು ಪಡೆದು ಅವುಗಳನ್ನು ಮೇಯಿಸುತ್ತಾ ಧ್ಯಾನ ಮಾಡುತ್ತಾ, ಹಲವಾರು ಪವಾಡಗಳನ್ನು ಮಾಡಿದರು. ಬಹಳಷ್ಟು ಬಡವರು ಮತ್ತು ದೀನರಿಗೆ ಸಹಾಯ ಮಾಡಿದರು. ಕನ್ನಡ ಮತ್ತು ಮರಾಠಿ ಭಾಷೆ ಬಲ್ಲವರಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಭಾಗಗಳನ್ನು ಒಳಗೊಂಡಂತೆ ತಮ್ಮ ಕುರಿಗಳೊಂದಿಗೆ ದೂರ ಪ್ರಯಾಣಿಸುತ್ತಿದ್ದರು. ಅವರು ಏನೇ ಹೇಳಿದರೂ ತಪ್ಪದೆ ನೆರವೇರುತ್ತಿತ್ತು. ಗ್ರಾಮೀಣ ಬಡವರಲ್ಲಿ ಒಂದು ದೊಡ್ಡ ಶಿಷ್ಯ ಸಮೂಹವು ಅವರನ್ನು ಸಂತ ಎಂದು ಪೂಜಿಸಲು ಪ್ರಾರಂಭಿಸಿದರು. ಬಾಳುಮಾಮ ಅವರ ಬಳಿಯಿದ್ದ ಕುರಿಗಳನ್ನು ಪವಿತ್ರವೆಂದು ಪರಿಗಣಿಸಲಾಗಿತ್ತು. ಬಾಳುಮಾಮಾ ಅವರ ಕುರಿಗಳ ಹಿಂಡು ಹೊಲದಲ್ಲಿ ಉಳಿದುಕೊಂಡರೆ ಅಥವಾ ಹೊಲದಲ್ಲಿ ಹಾದು ಹೋದರೆ, ಅವರು ಸಂತೋಷ, ಆರೋಗ್ಯ ಮತ್ತು ಸಂಪತ್ತನ್ನು ಹೊಂದುತ್ತಾರೆ ಎಂಬ ನಂಬಿಕೆಯಿದೆ. ಕುರಿಗಳನ್ನು ಕಾದರೆ ಅವರಿಗೆ ಶುಭವಾಗುವುದೆಂಬ ನಂಬಿಕೆಯಿದೆ. ಬಾಳುಮಾಮ ಮಹಾರಾಷ್ಟ್ರದ, ಕೊಲ್ಲಾಪುರ ಜಿಲ್ಲೆಯ, ಅದಮಾಪುರ ಎಂಬ ಗ್ರಾಮದಲ್ಲಿ 1966 ರಲ್ಲಿ 74 ನೇ ವಯಸ್ಸಿನಲ್ಲಿ ನಿಧನರಾದರು.
ಸಂತ ಬಾಳುಮಾಮ ಅವರು ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಕ್ಕೋಲ್ ಎಂಬ ಗ್ರಾಮದಲ್ಲಿ 1892 ರಲ್ಲಿ ಜನಿಸಿದರು. ತಂದೆ ಮಾಯಪ್ಪ ಮತ್ತು ತಾಯಿ ಸತ್ಯವ್ವ. ಶಾಂತ ಹುಡುಗನಾಗಿ ಯಾವಾಗಲೂ ಧ್ಯಾನ ಮಾಡುತ್ತಿದ್ದನು. ತನ್ನ ಸಹೋದರಿಯೊಂದಿಗೆ ವಾಸಿಸುತ್ತಿದ್ದ ಅವರಿಗೆ ಇಚ್ಛೆಯ ವಿರುದ್ಧವಾಗಿ ಅವಳ ಮಗಳನ್ನು ಮದುವೆ ಮಾಡಿದರು. ಮದುವೆಯ ಜೀವನ ಹೆಚ್ಚು ಕಾಲ ಉಳಿಯಲಿಲ್ಲ. ಸಂಬಂಧಿಕರಿಂದ ಸುಮಾರು 15 ಕುರಿಗಳನ್ನು ಪಡೆದು ಅವುಗಳನ್ನು ಮೇಯಿಸುತ್ತಾ ಧ್ಯಾನ ಮಾಡುತ್ತಾ, ಹಲವಾರು ಪವಾಡಗಳನ್ನು ಮಾಡಿದರು. ಬಹಳಷ್ಟು ಬಡವರು ಮತ್ತು ದೀನರಿಗೆ ಸಹಾಯ ಮಾಡಿದರು. ಕನ್ನಡ ಮತ್ತು ಮರಾಠಿ ಭಾಷೆ ಬಲ್ಲವರಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಭಾಗಗಳನ್ನು ಒಳಗೊಂಡಂತೆ ತಮ್ಮ ಕುರಿಗಳೊಂದಿಗೆ ದೂರ ಪ್ರಯಾಣಿಸುತ್ತಿದ್ದರು. ಅವರು ಏನೇ ಹೇಳಿದರೂ ತಪ್ಪದೆ ನೆರವೇರುತ್ತಿತ್ತು. ಗ್ರಾಮೀಣ ಬಡವರಲ್ಲಿ ಒಂದು ದೊಡ್ಡ ಶಿಷ್ಯ ಸಮೂಹವು ಅವರನ್ನು ಸಂತ ಎಂದು ಪೂಜಿಸಲು ಪ್ರಾರಂಭಿಸಿದರು. ಬಾಳುಮಾಮ ಅವರ ಬಳಿಯಿದ್ದ ಕುರಿಗಳನ್ನು ಪವಿತ್ರವೆಂದು ಪರಿಗಣಿಸಲಾಗಿತ್ತು. ಬಾಳುಮಾಮಾ ಅವರ ಕುರಿಗಳ ಹಿಂಡು ಹೊಲದಲ್ಲಿ ಉಳಿದುಕೊಂಡರೆ ಅಥವಾ ಹೊಲದಲ್ಲಿ ಹಾದು ಹೋದರೆ, ಅವರು ಸಂತೋಷ, ಆರೋಗ್ಯ ಮತ್ತು ಸಂಪತ್ತನ್ನು ಹೊಂದುತ್ತಾರೆ ಎಂಬ ನಂಬಿಕೆಯಿದೆ. ಕುರಿಗಳನ್ನು ಕಾದರೆ ಅವರಿಗೆ ಶುಭವಾಗುವುದೆಂಬ ನಂಬಿಕೆಯಿದೆ. ಬಾಳುಮಾಮ ಮಹಾರಾಷ್ಟ್ರದ, ಕೊಲ್ಲಾಪುರ ಜಿಲ್ಲೆಯ, ಅದಮಾಪುರ ಎಂಬ ಗ್ರಾಮದಲ್ಲಿ 1966 ರಲ್ಲಿ 74 ನೇ ವಯಸ್ಸಿನಲ್ಲಿ ನಿಧನರಾದರು.
ಶ್ರೀ ರೇವಣ ಸಿದ್ದೇಶ್ವರ ಮಹಾನ್ ಜಗದ್ಗುರು ಶ್ರೀ ರೇಣುಕಾಚಾರ್ಯರ ಪುನರ್ಜನ್ಮವೆಂದು ಪರಿಗಣಿಸಲಾಗಿದೆ, ಅವರು ಜನರಲ್ಲಿ ಭಕ್ತಿಯನ್ನು ಹರಡಲು ಭೂಮಿಯ ಮೇಲೆ ಅವತಾರವನ್ನು ತೆಗೆದುಕೊಳ್ಳಲು ಶಿವನಿಂದ ಆದೇಶಿಸಿದರು. [1]ಭಗವಾನ್ ಶಿವನ ಆಶೀರ್ವಾದದೊಂದಿಗೆ, ಜಗದ್ಗುರು ರೇಣುಕಾಚಾರ್ಯರು
ರೇವಣಸಿದ್ದೇಶ್ವರರು 11-12ನೇ ಶತಮಾನದ ಮಹಾ ಸಿದ್ದರು. ಮುದ್ದೇಬಿಹಾಳಿನ ಸರೂರು ಈತನ ಜನ್ಮಸ್ಥಳವೆಂದು ರಾಮನಗರದ ರೇವಣಸಿದ್ದೇಶ್ವರ ಬೆಟ್ಟ ಅಂತ್ಯ ಸ್ಥಳವೆಂದು ಗುರುತಿಸುತ್ತಾರೆ. ತಂದೆ ತಾಯಿಯೊಂದಿಗೆ ಮಗುವಿದ್ದಾಗ ಉತ್ತರಪ್ರದೇಶಕ್ಕೆ ಯಾತ್ರೆಗೆ ಹೋದಾಗ ಮಗು ಕಳೆದುಹೋಗಿ ಕಾಳಮುಖ ಪಂಥದವರೊಂದಿಗೆ ಹಲವಾರು ಪಂಥಗಳ ಯೋಗಿಗಳ ಸಹವಾಸದಿಂದ ಎಲ್ಲಾ ರೀತಿಯ ಯೋಗ ವಿದ್ಯೆಗಳನ್ನು ಬಾಲಕನಿದ್ದಾಗಲೇ ಸಿದ್ದಿಸಿಕೊಂಡು ದಕ್ಷಿಣ ಯಾತ್ರೆಯನ್ನು ಕೈಗೊಂಡನು. ಭಾರತದಾದ್ಯಂತ ಪ್ರಚಾರದಲ್ಲಿದ್ದ ಜೈನರ, ತ್ರಿಮತಸ್ಥರ ಪ್ರಭಾವ ಮತ್ತು ಧರ್ಮದ ಹೆಸರಿನಲ್ಲಿ ಆಗುತ್ತಿದ್ದ ಸುಲಿಗೆ ವಂಚನೆಗಳನ್ನು ತಡೆಯಲು ಸಂಕಲ್ಪ ಕೊಲ್ಲಿಪಾಕಿಯಲ್ಲಿ ಸಂಕಲ್ಪ ಮಾಡಿದನು. ಶಿವಸಿದ್ದ- ನಾಥ ಪರಂಪರೆಯನ್ನು ಪ್ರಚಾರ ಮಾಡಿದನು. ಜನಸಾಮಾನ್ಯರಿಗೂ ಕಾಯಕದೊಂದಿಗೆ ಧರ್ಮಾಚರಣೆ ಮತ್ತು ದೈವಿ ಪ್ರೇಮವನ್ನು ಪಡೆಯುವ ಮಾರ್ಗವನ್ನು ಬೋಧಿಸಿದರು. ಪೂಜೆ ಪುನಸ್ಕಾರಗಳಿಗೆ ಅನ್ಯರನ್ನು ಅವಲಂಬಿಸಬಾರದೆಂದು, ಮೋಸ ಹೋಗಬಾರದೆಂದು ಪ್ರತಿಯೊಂದು ಜಾತಿಯವರಿಗೂ ದೀಕ್ಷೆಯನ್ನು ನೀಡಿ, ಧಾರ್ಮಿಕ ಮುಖಂಡತ್ವವನ್ನು ನೀಡಿ ಮಠಗಳನ್ನು ಕಟ್ಟಿಸಿದ ಕೀರ್ತಿ ರೇವಣಸಿದ್ದೇಶ್ವರದು. ಸಂಸ್ಕೃತ ಮಂತ್ರಕ್ಕೆ ಮಾರು ಹೋಗಿದ್ದ ಜನರಿಗೆ ಕನ್ನಡ ಮಂತ್ರಗಳನ್ನು ಪರಿಚಯಿಸಿದ ಮೊದಲ ಗುರು ಆಗಿದ್ದಾರೆ. ರಾಜಗುರುವಾಗಿದ್ದರೂ, ಸಕಲ ಯೋಗಗಳನ್ನು ಕಲಿತಿದ್ದರೂ ಸಹ ಜನರಿಗೆ ಉಪಯೋಗವಾಗುವ ಕೆರೆಕಟ್ಟೆ, ಬಾವಿಗಳನ್ನು, ದೇವಸ್ಥಾನಗಳನ್ನು, ದಾಸೋಹ ಛತ್ರಗಳನ್ನು ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವಶೀಕರಣಕ್ಕೆ ಸಿದ್ಧಿಗಳಿಗೆ ಹಾಗೂ ದೇವರ ಹೆಸರಿನಲ್ಲಿ ಮಾಡುತ್ತಿದ್ದ ನರಬಲಿ ಪ್ರಾಣಿ ಬಲಿ ಪದ್ಧತಿಗಳನ್ನು ತಪ್ಪಿಸಿದರು. ಸಮಾಜ ಧಾರ್ಮಿಕ ನ್ಯಾಯಕ್ಕಾಗಿ ಶ್ರಮಿಸುತ್ತಿದ್ದ ಶರಣರ ಪ್ರಯತ್ನಕ್ಕೆ ನೆರವಾಗಿದ್ದಲ್ಲದೆ ಪ್ರೇರಣೆಯಾಗಿ ನಿಂತಿದ್ದರು. ವೀರಶೈವ, ಲಿಂಗಾಯಿತ, ಹಾಲುಮತ ಜನಾಂಗಗಳಿಗೆ ಗುರು ಪರಂಪರೆಗಳನ್ನು ನೀಡಿದರು. ಇವರನ್ನು ಜಗದ್ಗುರು ರೇಣುಕಾಚಾರ್ಯ ಎಂದು ಪ್ರಚಾರ ಮಾಡಲಾಗಿದೆ. ರೇವಣಸಿದ್ದರ ಹಿನ್ನೆಲೆ ಮತ್ತು ಪ್ರಭಾವದಿಂದ 'ಸಿದ್ದ' ಹೆಸರಿನಲ್ಲಿ ನಾಡಿನಾದ್ಯಂತ ಕ್ಷೇತ್ರಗಳಾಗಿವೆ. ರೇವಣಸಿದ್ಧರ ತಂದೆ ಶಾಂತಮಯ್ಯ ಎಂದು ಶಾಸನದಲ್ಲಿ ಹೆಸರಿಸಲಾಗಿದೆ. ತಂದೆಯ ಸಮಾಧಿ ಯಾದಗಿರಿ ಜಿಲ್ಲೆಯ ಶಹಪುರ ತಾಲ್ಲೂಕಿನ ಶಿರವಾಳದಲ್ಲಿ ಸಿದ್ದಲಿಂಗೇಶ್ವರ ಹೆಸರಿನಲ್ಲಿ ದೇವಸ್ಥಾನದ ಇರುತ್ತದೆ. ಶಿವನ ನಂತರ ಜನಸಾಮಾನ್ಯರಿಂದ ಜಗದ್ಗುರು ಎಂದು ಬಿರುದನ್ನು ಪಡೆದ ಪ್ರಥಮ ಗುರು ರೇವಣಸಿದ್ದೇಶ್ವರರು.
ಚಂದ್ರಗುಪ್ತ ಮೌರ್ಯ ( ಈತನನ್ನು ಚಂದ್ರಗುಪ್ತ ಎಂದಷ್ಟೇ ಕರೆಯುವದೂ ಉಂಟು) ಹುಟ್ಟಿದ್ದು ಕ್ರಿ.ಪೂ. ೩೪೦ ರಲ್ಲಿ. ಆಳಿದ್ದು ಕ್ರಿಸ್ತಪೂರ್ವ ೩೨೦-೨೯೮ ರ ಅವಧಿಯಲ್ಲಿ. ಇವನು ಮೌರ್ಯ ಸಾಮ್ರಾಜ್ಯದ ಸ್ಥಾಪಕನು. ಇವನು ಭಾರತ ಉಪಖಂಡದ ಬಹುಭಾಗವನ್ನು ಒಗ್ಗೂಡಿಸುವದರಲ್ಲಿ ಯಶಸ್ವಿಯಾದನು. ಈ ಕಾರಣಕ್ಕಾಗಿ ಇವನನ್ನು ಭಾರತವನ್ನು ಒಗ್ಗೂಡಿಸಿದ ಮೊದಲ ವ್ಯಕ್ತಿ ಮತ್ತು ಭಾರತದ ಮೊದಲ
ಚಂದ್ರಗುಪ್ತ ಮೌರ್ಯ ( ಈತನನ್ನು ಚಂದ್ರಗುಪ್ತ ಎಂದಷ್ಟೇ ಕರೆಯುವದೂ ಉಂಟು) ಹುಟ್ಟಿದ್ದು ಕ್ರಿ.ಪೂ. ೩೪೦ ರಲ್ಲಿ. ಆಳಿದ್ದು ಕ್ರಿಸ್ತಪೂರ್ವ ೩೨೦-೨೯೮ ರ ಅವಧಿಯಲ್ಲಿ. ಇವನು ಮೌರ್ಯ ಸಾಮ್ರಾಜ್ಯದ ಸ್ಥಾಪಕನು. ಇವನು ಭಾರತ ಉಪಖಂಡದ ಬಹುಭಾಗವನ್ನು ಒಗ್ಗೂಡಿಸುವದರಲ್ಲಿ ಯಶಸ್ವಿಯಾದನು. ಈ ಕಾರಣಕ್ಕಾಗಿ ಇವನನ್ನು ಭಾರತವನ್ನು ಒಗ್ಗೂಡಿಸಿದ ಮೊದಲ ವ್ಯಕ್ತಿ ಮತ್ತು ಭಾರತದ ಮೊದಲ ನಿಜವಾದ ಸಾಮ್ರಾಟ್ ಎಂದು ಪರಿಗಣಿಸುತ್ತಾರೆ. ಚಂದ್ರಗುಪ್ತನು ಅಧಿಕಾರವನ್ನು ಬಲಪಡಿಸುವ ಮೊದಲು ಉಪಖಂಡದ ವಾಯುವ್ಯ ಭಾಗದಲ್ಲಿ ಸಣ್ಣ ಸಣ್ಣ ರಾಜ್ಯಗಳೇ ಇದ್ದವು . ಗಂಗಾ ನದಿಯ ಬಯಲಿನಲ್ಲಿ ನಂದರ ಸಾಮ್ರಾಜ್ಯವು ಪ್ರಮುಖವಾಗಿತ್ತು. ಚಂದ್ರಗುಪ್ತನ ವಿಜಯದ ನಂತರ ಮೌರ್ಯ ಸಾಮ್ರಾಜ್ಯವು ಪೂರ್ವದಲ್ಲಿ ಬೆಂಗಾಲ್ ಮತ್ತು ಆಸ್ಸಾಮದಿಂದ ಪಶ್ಚಿಮದಲ್ಲಿ ಅಫ್ಘಾನಿಸ್ಥಾನ ಮತ್ತು ಬಲೂಚಿಸ್ಥಾನ ದವರೆಗೂ , ಉತ್ತರದಲ್ಲಿ ವಾಯುವ್ಯ ಕಾಶ್ಮೀರ ಮತ್ತು ಈಶಾನ್ಯನೇಪಾಳದಿಂದ ದಕ್ಷಿಣದಲ್ಲಿ ಡೆಕ್ಕನ್ ಪ್ರಸ್ಥಭೂಮಿಯವರೆಗೂ ಹಬ್ಬಿತ್ತು.
ವಿಜಯಪುರದ ಇಂಡಿ ತಾಲೂಕಿನ ಮಿರಗಿ ಎಂಬ ಗ್ರಾಮದಲ್ಲಿ, ಶಿವಪ್ಪ ಕಾಶಿಬಾಯಿ ಎಂಬ ಪುಣ್ಯ ದಂಪತಿಗಳ ಮಗನಾಗಿ ಜನಿಸಿ ಬಂದ ಮಗುವೇ ಯಲ್ಲಪ್ಪ ಎಂಟು ವರ್ಷ ಪ್ರಾಯದಲ್ಲೇ ಶಿವ ಧ್ಯಾನ ನಿರತನಾಗಿ ಕುರಿ ಕಾಯುವ ಕಾಯಕ ಮಾಡುತ್ತಾ, ಗರಡಿ ಮನೆಯಲ್ಲಿ ಪಳಗಿ ಕುಸ್ತಿ ಪಟುವಾಗಿದ್ದರು, ಮನೆಯವರ ಬಲವಂತಕ್ಕೆ ಒಲ್ಲದ ಮನಸ್ಸಿನಿಂದಲೇ ಹೊನ್ನಮ್ಮ ಎಂಬವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮಡದಿ ಗರ್ಭವತಿಯಾದಳು, ನವಮಾಸಗಳು ತುಂಬುವಷ್ಟರಲ್ಲೇ ತಾಯಗರ್ಭದಲ್ಲೇ ಶಿಶು ಸತ್ತಿತು ಅದರೊಂದಿಗೆ ಮಡದಿ ಹೊನ್ನಮ್ಮಳು ಕೂಡ ಕೊನೆ ಉಸಿರೆಳೆದಳು. ತನ್ನ ಮಡದಿ ಹಾಗೂ ಮಗುವನ್ನು ಕಳೆದು ಕೊಂಡ ಯಲ್ಲಪ್ಪ, ಸಂಸಾರ ಮಾಯಾ ಮೋಹಗಳನ್ನು ಸುಟ್ಟು, ಮೈ ತುಂಬ ಭಸ್ಮ ಧರಿಸಿ ವಿರಾಗಿಯಾಗಿ ಲಚ್ಯಾಣದ ಸಿದ್ಧಲಿಂಗ ಮಹಾರಾಜರ ದರುಶನಕ್ಕೆ ಬಂದು ಊರ ಹೊರಗಿನ ಗಿಡದ ಕೆಳಗೆ ಕುಳಿತು ಧ್ಯಾನಸ್ಥನಾದ ಯಲ್ಲಪ್ಪನ ಶರೀರವು ಗಾಳಿಯಲ್ಲಿ ತೇಲಿದಂತೆ ಕಾಣುತಿತ್ತು. ಅಷ್ಟರಲ್ಲೇ ಮೂರು ದಿನ ಕಳೆಯಿತು, ಸುದ್ದಿ ತಿಳಿದ ಸಿದ್ಧಲಿಂಗರೇ ಯಲ್ಲಪ್ಪನನ್ನು ಹುಡುಕಿಕೊಂಡು ಬಂದರು. ‘ಇದೋ ಯಲ್ಲಪ್ಪ ನಿನ್ನ ಮೂರು ದಿನ ಮಣ್ಣಾಗ ಮಲಗಸ್ತೀನಿ, ನೀ ಎದ್ದು ಬಂದ್ರ ನನ್ನ ಶಿಷ್ಯ ಮಾಡ್ಕೊಂತೀನಿ, ಸತ್ತಿಯಂದ್ರ ಇಲ್ಲೇ ಮಣ್ಣ ಮಾಡ್ತೀನಿ’ ಎಂದು ಯಲ್ಲಪ್ಪನಿಗೆ ಪರೀಕ್ಷೆಯನೊಡ್ಡಿದರು. ಮೂರು ದಿನ ಸಮಾದಿಯಲ್ಲೇ ಧ್ಯಾನಸ್ಥನಾದ ಯಲ್ಲಪ್ಪ ನಾಲ್ಕನೇ ದಿನ ಸಮಾದಿ ಅಗೆದು ನೋಡಿದರೆ ಜೀವಂತವಾಗಿ ಧ್ಯಾನಸ್ಥ ಸ್ಥಿತಿಯಲ್ಲೇ ತಪೋ ನಿರತನಾಗಿದ್ದ, ಇದನ್ನು ಕಂಡ ಸಿದ್ಧಲಿಂಗ ಮಹಾರಾಜರು ಇದೋ ಇವನೇ ನನ್ನ ಪ್ರಿಯ ಶಿಷ್ಯನು ಎಂದು ಹೇಳಿ, ದೀಕ್ಷೆ ನೀಡಿ ಬೆತ್ತ, ಜೋಳಿಗೆ ಕೊಟ್ಟು ಯಲ್ಲಪ್ಪ ಇಂದಿನಿಂದ ಯಲ್ಲಾಲಿಂಗ ಮಹಾರಾಜನಾಗಿ ದೇಶದಲ್ಲಿ ಮೆರೆ ಎಂದು ಆಶೀರ್ವದಿಸಿದರು. ಅಲ್ಲದೇ, ಇಲ್ಲಿಂದ ಮಶ್ಚಿಮಕ್ಕೆ ಪ್ರಯಣ ಬೆಳೆಸು ‘ಏಳು ಹಗಲು, ಏಳು ರಾತ್ರಿ’ ಮುಗಿದ ದಿನದಂದು ಅಲ್ಲೇ ನಿಂತ ಜಾಗದಲ್ಲೇ ನಿನ್ನ ಮಠ ಕಟ್ಟಿಕೊ ಎಂದು ಹರಸಿ ಕಳುಹಿಸಿ ಕೊಟ್ಟರು, ಯಲ್ಲಾಲಿಂಗರು ಪ್ರಯಣ ಆರಂಭಿಸಿ ಬೆಳಗಾವಿ, ರಾಯಭಾಗ ತಾಲೂಕಿನ ಮುಗಳಖೋಡ ಗ್ರಾಮದ ಸ್ಮಶಾನದಲ್ಲಿ ಅವರ ಪ್ರಯಣ ಕೊನೆಗೊಂಡಿತು. ಅಲ್ಲೇ ನಿಂತು ಸಿದ್ಧಲಿಂಗರ ಸ್ಮರಿಸಿ ಅಲ್ಲೇ ಗುಡಿಸಲು ಹಾಕಿಕೊಂಡು, ಬೀಕ್ಷಾಟನೆ ಮಾಡಿಕೊಂಡು ದಿನನಿತ್ಯದ ಆಹಾರ ಸಂಪಾದನೆ ಮಾಡಿಕೊಳ್ಳುತ್ತಿದ್ದರು, ಯಲ್ಲಾಲಿಂಗರ ಮಾತುಗಳು ಸತ್ಯವಾಗ ತೊಡಗಿದವು ಸುತ್ತಮುತ್ತಲ ಗ್ರಾಮದ ಜನರೆಲ್ಲ ಇವರನ್ನು ಕಾಣಲು ಬರ ತೊಡಗಿದರು, ಹಲವು ಕಷ್ಟಗಳ ಮಧ್ಯೆ ಯಲ್ಲಾಲಿಂಗ ಪ್ರಭುಗಳು ಸ್ಮಶಾನ ಭೂಮಿಯನ್ನೇ ಮುಕ್ತಿ ಮಂದಿರವಾಗಿಸಿದರು,
ವಿಜಯಪುರದ ಇಂಡಿ ತಾಲೂಕಿನ ಮಿರಗಿ ಎಂಬ ಗ್ರಾಮದಲ್ಲಿ, ಶಿವಪ್ಪ ಕಾಶಿಬಾಯಿ ಎಂಬ ಪುಣ್ಯ ದಂಪತಿಗಳ ಮಗನಾಗಿ ಜನಿಸಿ ಬಂದ ಮಗುವೇ ಯಲ್ಲಪ್ಪ ಎಂಟು ವರ್ಷ ಪ್ರಾಯದಲ್ಲೇ ಶಿವ ಧ್ಯಾನ ನಿರತನಾಗಿ ಕುರಿ ಕಾಯುವ ಕಾಯಕ ಮಾಡುತ್ತಾ, ಗರಡಿ ಮನೆಯಲ್ಲಿ ಪಳಗಿ ಕುಸ್ತಿ ಪಟುವಾಗಿದ್ದರು, ಮನೆಯವರ ಬಲವಂತಕ್ಕೆ ಒಲ್ಲದ ಮನಸ್ಸಿನಿಂದಲೇ ಹೊನ್ನಮ್ಮ ಎಂಬವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮಡದಿ ಗರ್ಭವತಿಯಾದಳು, ನವಮಾಸಗಳು ತುಂಬುವಷ್ಟರಲ್ಲೇ ತಾಯಗರ್ಭದಲ್ಲೇ ಶಿಶು ಸತ್ತಿತು ಅದರೊಂದಿಗೆ ಮಡದಿ ಹೊನ್ನಮ್ಮಳು ಕೂಡ ಕೊನೆ ಉಸಿರೆಳೆದಳು. ತನ್ನ ಮಡದಿ ಹಾಗೂ ಮಗುವನ್ನು ಕಳೆದು ಕೊಂಡ ಯಲ್ಲಪ್ಪ, ಸಂಸಾರ ಮಾಯಾ ಮೋಹಗಳನ್ನು ಸುಟ್ಟು, ಮೈ ತುಂಬ ಭಸ್ಮ ಧರಿಸಿ ವಿರಾಗಿಯಾಗಿ ಲಚ್ಯಾಣದ ಸಿದ್ಧಲಿಂಗ ಮಹಾರಾಜರ ದರುಶನಕ್ಕೆ ಬಂದು ಊರ ಹೊರಗಿನ ಗಿಡದ ಕೆಳಗೆ ಕುಳಿತು ಧ್ಯಾನಸ್ಥನಾದ ಯಲ್ಲಪ್ಪನ ಶರೀರವು ಗಾಳಿಯಲ್ಲಿ ತೇಲಿದಂತೆ ಕಾಣುತಿತ್ತು. ಅಷ್ಟರಲ್ಲೇ ಮೂರು ದಿನ ಕಳೆಯಿತು, ಸುದ್ದಿ ತಿಳಿದ ಸಿದ್ಧಲಿಂಗರೇ ಯಲ್ಲಪ್ಪನನ್ನು ಹುಡುಕಿಕೊಂಡು ಬಂದರು. ‘ಇದೋ ಯಲ್ಲಪ್ಪ ನಿನ್ನ ಮೂರು ದಿನ ಮಣ್ಣಾಗ ಮಲಗಸ್ತೀನಿ, ನೀ ಎದ್ದು ಬಂದ್ರ ನನ್ನ ಶಿಷ್ಯ ಮಾಡ್ಕೊಂತೀನಿ, ಸತ್ತಿಯಂದ್ರ ಇಲ್ಲೇ ಮಣ್ಣ ಮಾಡ್ತೀನಿ’ ಎಂದು ಯಲ್ಲಪ್ಪನಿಗೆ ಪರೀಕ್ಷೆಯನೊಡ್ಡಿದರು.
15 -16ನೇ ಶತಮಾನದಲ್ಲಿ ಇದ್ದ ಕನಕದಾಸರು ಸಮಾಜೋಧಾರ್ಮಿಕ ಸುಧಾರಣೆಗೆ ಧ್ವನಿ ಎತ್ತಿದವರು. ಹೆಸರಾಂತ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜನಾದ ಬಂಕಾಪುರದ ಬೀರಪ್ಪ ಮತ್ತು ಬಚ್ಚಮ್ಮ ದಂಪತಿಗಳಿಗೆ ತಿಮ್ಮಪ್ಪನ ಆಶೀರ್ವಾದದಿಂದ ಜನಿಸಿದ ಕನಕದಾಸರಿಗೆ ತಿಮ್ಮಪ್ಪ ನಾಯಕನೆಂದು ಹೆಸರಿಟ್ಟರು.
15 -16ನೇ ಶತಮಾನದಲ್ಲಿ ಇದ್ದ ಕನಕದಾಸರು ಸಮಾಜೋಧಾರ್ಮಿಕ ಸುಧಾರಣೆಗೆ ಧ್ವನಿ ಎತ್ತಿದವರು. ಹೆಸರಾಂತ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜನಾದ ಬಂಕಾಪುರದ ಬೀರಪ್ಪ ಮತ್ತು ಬಚ್ಚಮ್ಮ ದಂಪತಿಗಳಿಗೆ ತಿಮ್ಮಪ್ಪನ ಆಶೀರ್ವಾದದಿಂದ ಜನಿಸಿದ ಕನಕದಾಸರಿಗೆ ತಿಮ್ಮಪ್ಪ ನಾಯಕನೆಂದು ಹೆಸರಿಟ್ಟರು. ತಂದೆಯ ಅಕಾಲಿಕ ಮರಣದ ನಂತರ ಸಾಮಂತ ಅರಸನಾದ ಕನಕದಾಸರು ಯುದ್ದೋತ್ಸಾಹಿಯಾಗಿದ್ದರಲ್ಲದೆ ರಾಜನೀತಿಗಳಲ್ಲಿ ಅತ್ಯಂತ ನಿಪುಣತೆ ಹೊಂದಿದ್ದನು. ಕೆಲವೇ ದಿನಗಳಲ್ಲಿ ತಾಯಿಯನ್ನು, ತನ್ನ ಹೆಂಡತಿ, ಮಕ್ಕಳನ್ನು ಅಕಾಲಿಕವಾಗಿ ಕಳೆದುಕೊಂಡು ಜೀವನದಲ್ಲಿ ನಿರಾಸೆಗೊಂಡನು. ತನಗೆ ಸಿಕ್ಕ ಅಪಾರ ನಿಧಿಯನ್ನು ದೇವಸ್ಥಾನಗಳ ನಿರ್ಮಾಣಕ್ಕೆ ನೀಡಿದನು. ರಾಯಚೂರಿನ ಕೃಷ್ಣಾ ನದಿಯ ದಂಡೆಯಲ್ಲಿ ನಡೆದ ಯುದ್ಧದಲ್ಲಿ ಕನಕದಾಸರ ನೇತೃತವದ ಸೈನ್ಯವು ಗೆದ್ದಿತಾದರೂ ಕನಕದಾಸರಿಗೆ ಅಪಾರವಾದ ಗಾಯಗಳಾಗಿ ಪ್ರಗ್ನೆತಪ್ಪಿ ಬಿದ್ದರು. ಕನಕದಾಸರು ಸತ್ತರೆಂದು ಭಾವಿಸಿ ಬಂಕಾಪುರ ಮಾಂಡಳಿಕ ಸ್ಥಾನವನ್ನು ತರಾತುರಿಯಲ್ಲಿ ಮತ್ತೊಬ್ಬರು ಪಡೆದರು. ದೇವರ ಕೃಪೆಯಿಂದ ಆರೋಗ್ಯವನ್ನು ಮರಳಿ ಪಡೆದ ಕನಕದಾಸರಿಗೆ ಬಂಕಾಪುರಕ್ಕೆ ಹಿಂದಿರುಗಿದರು. ಮಾಂಡಲಿಕ ಅರಸೊತ್ತಿಗೆಯನ್ನು ಬೇರೋಬ್ಬರು ಪಡೆದಿರುವುದನ್ನು ನೋಡಿ ವೈರಾಗ್ಯ ಹೊಂದಿದರು. ವೈಷ್ಣವ ಪರಂಪರೆಯ ಪ್ರಭಾವ ಹೆಚ್ಚಾಗಿದ್ದ ಆ ಕಾಲದಲ್ಲಿ ಕನಕರು ಕಾಗಿನೆಲೆಯನ್ನು ಕಾರ್ಯಕ್ಷೇತ್ರ ಮಾಡಿಕೊಂಡು ಲೋಕ ಸಂಚಾರ ಮಾಡುತ್ತಾ ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿನ ಹಲವಾರು ಅಂಕುಡೊಂಕುಗಳನ್ನು ತಿದ್ದಲು ಧ್ವನಿ ಎತ್ತಿದರು. ರಾಮಧಾನ್ಯ ಚರಿತೆ, ಮೋಹನ ತರಂಗಿಣಿ, ನೃಸಿಂಹ ಸ್ತವ ಹರಿಭಕ್ತಿಸಾರ ಎಂಬ ಗ್ರಂಥಗಳಲ್ಲದೆ ಹಲವಾರು ಕೀರ್ತನೆಗಳನ್ನು ರಚಿಸಿದರು. ದೇವರಿಂದಲೇ ದೀಕ್ಷೆಯನ್ನು ಪಡೆದ ಕನಕದಾಸರು, ಅಪಾರ ದೈವಿಭಕ್ತಿ, ಜನಪ್ರಿಯತೆ ಹೊಂದಿದ ಕಾರಣ ವ್ಯಾಸ ಕೂಟಕ್ಕೆ ಆಪ್ತರಾದರು ನಂತರ ವ್ಯಾಸ ಕೂಟವೇ ದಾಸ ಕೂಟವಾಗಿ ಪ್ರಚಾರವನ್ನು ಹೊಂದಿತು. ಜಾತೀಯತೆ, ಮಡಿವಂತಿಕೆ, ಹಣೆಬರಹ, ಬಲಿ ಪದ್ಧತಿಗಳನ್ನು ವಿರೋಧಿಸಿದರು. ಜೀವ ವಿರೋಧಿ ಗ್ರಂಥಗಳನ್ನು ಕ್ರೂರ ಶಾಸ್ತ್ರಗಳೆಂದು, ಹಣೆಬರಹ, ಅಪುತ್ರಸ್ಯ ಗತಿರ್ನಸ್ತಿ ಎಂಬಂತಹ ನಂಬಿಕೆಗಳು ಸುಳ್ಳೆಂದು ಸಾರಿದರು. ದೇವರ ಧರ್ಮ ಇರುವುದು ಮುಕ್ತಿ ಮತ್ತು ಆನಂದ ಸಾಧನೆಗೆ ಹೊರತು ವ್ಯಾಪಾರಕ್ಕಾಗಿ ಅಲ್ಲ ಎಂದು ಹೇಳುತ್ತಾ ದವೀ ಪ್ರೇಮವನ್ನು ಪಡೆದಾತನೆ ನಿಜವಾದ ಜಾತಿಯವನೆಂದು ಸಾರಿದರು.
ಮೊದಲನೆಯ ಅಮೋಘವರ್ಷ ಅಥವಾ ಅಮೋಘವರ್ಷ ನೃಪತುಂಗನು ಕ್ರಿ.ಶ. ೮೧೪ರಲ್ಲಿ ಮುಮ್ಮಡಿ ಗೋವಿಂದನ ನಂತರ ರಾಷ್ಟ್ರಕೂಟರ ರಾಜನಾಗಿ ಸಿಂಹಾಸನವೇರಿದನು. ಇವನು "ನೃಪತುಂಗ" ಎಂಬ ಹೆಸರಿನಿಂದ ಹೆಚ್ಚು ಪ್ರಖ್ಯಾತನಾಗಿದ್ದಾನೆ.
ಮೊದಲನೆಯ ಅಮೋಘವರ್ಷ ಅಥವಾ ಅಮೋಘವರ್ಷ ನೃಪತುಂಗನು ಕ್ರಿ.ಶ. ೮೧೪ರಲ್ಲಿ ಮುಮ್ಮಡಿ ಗೋವಿಂದನ ನಂತರ ರಾಷ್ಟ್ರಕೂಟರ ರಾಜನಾಗಿ ಸಿಂಹಾಸನವೇರಿದನು. ಇವನು "ನೃಪತುಂಗ" ಎಂಬ ಹೆಸರಿನಿಂದ ಹೆಚ್ಚು ಪ್ರಖ್ಯಾತನಾಗಿದ್ದಾನೆ. ರಾಜನಾದಾಗ ಇವನಿಗೆ ಕೇವಲ 14 ವರ್ಷ. ಸ್ವಭಾವತಃ ಶಾಂತಿಪ್ರಿಯನಾಗಿದ್ದರೂ, ಹಲವು ದೀರ್ಘಕಾಲದ ಯುದ್ಧಗಳಲ್ಲಿ ತೊಡಗಿಕೊಳ್ಳಬೇಕಾಯಿತು.ಮತ್ತು ಇವನು ಜೈನ್ ದರ್ಮದವನು ಕಾಲ ಉತ್ತರಭಾರತದ ದಿಗ್ವಿಜಯ ಮಾಡಿ ಬಂದ 3ನೆಯ ಗೋವಿಂದನ ಮಗ. ಗೋವಿಂದ ವಿಂಧ್ಯಪರ್ವತದ ತಪ್ಪಲಲ್ಲಿದ್ದ ಶ್ರೀಭವನದಲ್ಲಿ ಬೀಡುಬಿಟ್ಟಿದ್ದಾಗ ಶರ್ವ-ಅಮೋಘವರ್ಷ ಹುಟ್ಟಿದನೆಂದು ಸಂಜಾನ ಶಾಸನದಲ್ಲಿ ಹೇಳಿದೆ. 803ರ ಮಣ್ಣೆಯ ಶಾಸನದಲ್ಲಿ ಗೋವಿಂದ ಶ್ರೀಭವನದಲ್ಲಿದ್ದ ಸಂಗತಿ ಉಕ್ತವಾಗಿದೆಯಾದ ಕಾರಣ ಅಮೋಘವರ್ಷ ಸು. 800ರಲ್ಲಿ ಜನ್ಮವೆತ್ತಿರಬಹುದು.
ಗದಗ ಜಿಲ್ಲೆ ರೋಣ ತಾಲೂಕಿನ ಇಟಗಿಯ ಭೀಮಾಂಬಿಕೆ ಸನ್ನಿಧಿ ಪ್ರಮುಖ ಕ್ಷೇತ್ರ. ಉತ್ತರ ಕರ್ನಾಟಕದ, ಆಂಧ್ರ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲೂ ಈ ದೇವಿಗೆ ಸಾಕಷ್ಟು ಭಕ್ತರಿದ್ದಾರೆ.
ಗದಗ ಜಿಲ್ಲೆ ರೋಣ ತಾಲೂಕಿನ ಇಟಗಿಯ ಭೀಮಾಂಬಿಕೆ ಸನ್ನಿಧಿ ಪ್ರಮುಖ ಕ್ಷೇತ್ರ. ಉತ್ತರ ಕರ್ನಾಟಕದ, ಆಂಧ್ರ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲೂ ಈ ದೇವಿಗೆ ಸಾಕಷ್ಟು ಭಕ್ತರಿದ್ದಾರೆ. ಇಟಗಿ ಧರ್ಮರ ವಂಶದ ಸೋಮಣ್ಣ ಹಾಗೂ ಹನುಮವ್ವ ಎಂಬ ದಂಪತಿಯ ಮೂರನೆ ಮಗಳು. ಬಾದಾಮಿಯ ಬನಶಂಕರಿಯ ಕೃಪೆಯಿಂದ ಜನಿಸಿದಳು. ಮೂಲ ಹೆಸರು ಭೀಮೆ. ಬಾಲ್ಯದಿಂದಲೇ ಅಧ್ಯಾತ್ಮದತ್ತ ಒಲವು ಬೆಳೆಸಿಕೊಂಡು ಸಂಸಾರದ ಸೆಳೆತದಿಂದ ದೂರವಿದ್ದಾಗ ಹಿರಿಯರ ಒತ್ತಾಯಕ್ಕೆ ಮಣಿದು ಸೋದರ ಮಾವನ ಮಗ ಒಗೆದಾಡಪ್ಪನೊಂದಿಗೆ ಮದುವೆಯಾಗಿ ರೋಣ ತಾಲೂಕಿನಲ್ಲಿಯೇ ಇರುವ ಕೊಪ್ಪ ಗ್ರಾಮಕ್ಕೆ ಬಂದಳು. ಲೌಕಿಕಜೀವನದೊಂದಿಗೆ ಪರಮಾರ್ಥ ಚಿಂತನೆಯಲ್ಲಿ ಮುಳುಗಿರುವಾಗ ಪತಿ ಪ್ಲೇಗ್‌ಗೆ ಬಲಿಯಾಗುತ್ತಾನೆ. ಹೀಗಾಗಿ ಪೂರ್ಣ ವಿರಕ್ತಳಾಗಿ ದೇವರ ಆರಾಧನೆಯಲ್ಲೇ ತೊಡಗಿಸಿಕೂಳ್ಳುತ್ತಾಳೆ. ಗಿಡಮೂಲಿಕೆಗಳ ವೈದ್ಯ ಜ್ಞಾನ ಹಾಗೂ ಆಧ್ಯಾತ್ಮಶಕ್ತಿಯಿಂದ ರೋಗಿಗಳ ರೋಗಗಳನ್ನು ನಿವಾರಿಸಿದಳು, ಬರಗಾಲ ಬಂದಾಗ ಜನರನ್ನು ರಕ್ಷಿಸಿದ್ದಳು, ಬಡವರನ್ನು ಶ್ರೀಮಂತರನ್ನಾಗಿ ಮಾಡಿದಳು ಎಂಬುದು ಜನರ ನಂಬಿಕೆ. ಸಂಗಟಿ ಉಂಡು ಸಂಕಟ ಕಳೆಯಿರಿ, ನಂಬಿ ನೆನೆದವರ ಮನೆಯನ್ನು ರಕ್ಷಿಸುವ ಭರವಸೆಯನ್ನು ಭಕ್ತರಿಗೆ ನೀಡಿದಳು. ಜನೋಪಕಾರಿ ಕಾರ್ಯಗಳಿಂದ ಪ್ರಭಾವಿತರಾದ ಭಕ್ತರು ಅವಳನ್ನು ಭೀಮವ್ವ, ಭೀಮಾಂಬಿಕೆ ಎಂದು ಕರೆದು ದೈವತ್ವಕ್ಕೆ ಏರಿಸಿದ್ದಾರೆ.
ಇತಿಹಾಸದ ಶ್ರೇಷ್ಠ ರಾಜರಲ್ಲಿ ಒಬ್ಬರು. ತಂದೆ ಬಿಂದುಸಾರ, ತಾಯಿ ಸುಭದ್ರಾಂಗಿ. 101 ಗಂಡು ಮಕ್ಕಳಲ್ಲಿ ಅಶೋಕ ಎರಡನೇ ಮಗ. ಬಾಲ್ಯದಲ್ಲಿಯೇ ಅತ್ಯಂತ ಚಾಣಾಕ್ಷ ಮತ್ತು ಶೂರನಾಗಿದ್ದ ಅಶೋಕನು ತನ್ನ ಅದಿನಾರನೇ ವಯಸ್ಸಿನಲ್ಲೇ ಯುದ್ಧಮಾಡಿ ಗೆದ್ದವನು. 273 BC ಯಲ್ಲಿ ಪಟ್ಟಾಧಿಕಾರ ಹೊಂದಿದನು.
ಇತಿಹಾಸದ ಶ್ರೇಷ್ಠ ರಾಜರಲ್ಲಿ ಒಬ್ಬರು. ತಂದೆ ಬಿಂದುಸಾರ, ತಾಯಿ ಸುಭದ್ರಾಂಗಿ. 101 ಗಂಡು ಮಕ್ಕಳಲ್ಲಿ ಅಶೋಕ ಎರಡನೇ ಮಗ. ಬಾಲ್ಯದಲ್ಲಿಯೇ ಅತ್ಯಂತ ಚಾಣಾಕ್ಷ ಮತ್ತು ಶೂರನಾಗಿದ್ದ ಅಶೋಕನು ತನ್ನ ಅದಿನಾರನೇ ವಯಸ್ಸಿನಲ್ಲೇ ಯುದ್ಧಮಾಡಿ ಗೆದ್ದವನು. 273 BC ಯಲ್ಲಿ ಪಟ್ಟಾಧಿಕಾರ ಹೊಂದಿದನು. ಶಿವ ಭಕ್ತಿಯೊಂದಿಗೆ ಎಲ್ಲಾ ಮತ ಪಂಥಗಳ ಬಗ್ಗೆ ಗೌರವ ಹೊಂದಿದ್ದನು. ಕಳಿಂಗ ಯುದ್ಧದ ನಂತರ, ಅಪಾರ ಸಾವು ನೋವುಗಳಿಗೆ, ಬಂಧನಗಳಿಂದ ನೊಂದು ಬೌದ್ಧ ಧರ್ಮವನ್ನು ಸ್ವೀಕರಿಸಿದನು. ಬೌದ್ಧ ಧರ್ಮದ ಪ್ರಚಾರಕ್ಕಾಗಿ ಹಲವಾರು ಮಿಷಿನರಿಗಳನ್ನು ಸ್ಥಾಪಿಸಿದನು. ಜನರ ನೆರಳಿಗಾಗಿ ಆಲದ, ಮಾವಿನ ತೋಪುಗಳನ್ನು ನೆಡಿಸಿದನು. ರಸ್ತೆ ಬದಿಯಲ್ಲಿ ಬಾವಿಗಳನ್ನು ಮತ್ತು ಜನರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲು ಆದೇಶಿಸಿದನು. ಪ್ರಾಣಿಗಳಿಗೆ ನೀರುಣಿಸುವ ಸ್ಥಳಗಳನ್ನು, ಜನರ ಮತ್ತು ಪ್ರಾಣಿಗಳ ಚಿಕಿತ್ಸಾ ಕೇಂದ್ರಗಳ ವ್ಯವಸ್ಥೆ ಮಾಡಿದನು. ಅವರು ಜನರ ಚಿಕಿತ್ಸೆಗಾಗಿ ಔಷಧೀಯ ಗಿಡಮೂಲಿಕೆಗಳನ್ನು ನೆಟ್ಟರು. ಪ್ರಾಣಿಬಲಿ ನಿಲ್ಲಿಸಲು ಮತ್ತು ಪ್ರಾಣಿಗಳಿಗೆ ಗಾಯವನ್ನು ಪರಿಶೀಲಿಸಲು ಶಾಸನಗಳನ್ನಲ್ಲದೆ , ಮಾಂಸಕ್ಕಾಗಿ ಪ್ರಾಣಿಗಳನ್ನು ಕೊಲ್ಲುವ ಸಮಾಜಗಳನ್ನು ನಿಷೇಧಿಸಿದನು. ತನ್ನ ಜೀವನವನ್ನು ಸಂಪೂರ್ಣವಾಗಿ ಬೌದ್ಧ ಧರ್ಮದ ಪ್ರಚಾರಕ್ಕಾಗಿ ಮತ್ತು ಧಾರ್ಮಿಕ ಆಚರಣೆಗಳಿಗೆ ಸೀಮಿತಗೊಳಿಸಿದನು. ರಾಜತಾಂತ್ರಿಕತೆ ಮತ್ತು ಆಡಳಿತದ ವ್ಯವಸ್ಥೆ ಹಿಡಿತ ತಪ್ಪಿದ್ದನ್ನು ಋಷ್ಯಶೃಂಗ ಎಂಬುವನು ಬಳಸಿಕೊಂಡು ಅಶೋಕನ ಮೌರ್ಯ ಸಾಮ್ರಾಜ್ಯವು ನಾಶವಾಗಲು ಕಾರಣನಾದನು.
ಸಂಗೊಳ್ಳಿ ರಾಯಣ್ಣ 15 ಆಗಸ್ಟ್ 1798 ರಲ್ಲಿ ಜನಿಸಿ, 26 ಜನವರಿ 1831 ರಲ್ಲಿ ಹುತಾತ್ಮರಾದರು. ಬೆಳಗಾವಿಯ ಸಂಗೊಳ್ಳಿಯಲ್ಲಿ ಜನಿಸಿದ ಅವರು 19 ನೇ ಶತಮಾನದ ಆರಂಭದಲ್ಲಿ ಕಿತ್ತೂರು ಚೆನ್ನಮ್ಮ ರಾಜ್ಯವನ್ನು ಆಳುತ್ತಿದ್ದಾಗ ಕಿತ್ತೂರಿನ ರಾಜ ಸಂಸ್ಥಾನದ ಮಿಲಿಟರಿಯಲ್ಲಿ ಹಿರಿಯ ಕಮಾಂಡರ್ ಆಗಿ ಸೇವೆ ಸಲ್ಲಿಸಿದರು.
ಸಂಗೊಳ್ಳಿ ರಾಯಣ್ಣ 15 ಆಗಸ್ಟ್ 1798 ರಲ್ಲಿ ಜನಿಸಿ, 26 ಜನವರಿ 1831 ರಲ್ಲಿ ಹುತಾತ್ಮರಾದರು. ಬೆಳಗಾವಿಯ ಸಂಗೊಳ್ಳಿಯಲ್ಲಿ ಜನಿಸಿದ ಅವರು 19 ನೇ ಶತಮಾನದ ಆರಂಭದಲ್ಲಿ ಕಿತ್ತೂರು ಚೆನ್ನಮ್ಮ ರಾಜ್ಯವನ್ನು ಆಳುತ್ತಿದ್ದಾಗ ಕಿತ್ತೂರಿನ ರಾಜ ಸಂಸ್ಥಾನದ ಮಿಲಿಟರಿಯಲ್ಲಿ ಹಿರಿಯ ಕಮಾಂಡರ್ ಆಗಿ ಸೇವೆ ಸಲ್ಲಿಸಿದರು . 1824 ರಲ್ಲಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ವಿಫಲವಾದ ದಂಗೆಯನ್ನು ಚೆನ್ನಮ್ಮ ಮುನ್ನಡೆಸಿ ಬಂಧನವಾದ ನಂತರ, ರಾಯಣ್ಣ ಭಾರತದಲ್ಲಿ ಕಂಪನಿ ಆಳ್ವಿಕೆಯನ್ನು ವಿರೋಧಿಸುವುದನ್ನು ಮುಂದುವರೆಸಿದನು. ಚೆನ್ನಮ್ಮನ ದತ್ತುಪುತ್ರ ಶಿವಲಿಂಗಪ್ಪನನ್ನು ಪ್ರತಿಷ್ಠಾಪಿಸಲು ಯೋಜಿಸಿದನು. ಬ್ರಿಟಿಷರು ವಿಧಿಸಿದ ತೆರಿಗೆ ಪದ್ಧತಿಯನ್ನು ವಿರೋಧಿಸಿ ರೈತರ ಸಹಕಾರ ಪಡೆದು ಬ್ರಿಟಿಷರ ವಿರುದ್ಧ ಹಲವಾರು ಸೈನಿಕರ ಪಡೆಗಳನ್ನು ಕಟ್ಟಿ ದಂಗೆ ಮತ್ತು ದಾಳಿಗಳನ್ನು ಮಾಡಿ ಬ್ರಿಟಿಷರಿಗೆ ಸಿಂಹ ಸ್ವಪ್ನನಾದನು. ಸುರಪುರದ ರಾಜವೆಂಕಟಪ್ಪ ನಾಯಕನು ಒಡ್ಡಿದ ಸವಾಲನ್ನು ಗೆದ್ದು ಸುರಪುರದಿಂದ 800ಕ್ಕೂ ಹೆಚ್ಚು ಸೈನಿಕರನ್ನು ತನ್ನ ಹೋರಾಟಕ್ಕೆ ಕರೆ ತಂದನು. ಏಪ್ರಿಲ್ 1830 ರಲ್ಲಿ, ರಾಯಣ್ಣನ ಸಂಬಂಧಿಕರ ಸಹಕಾರದಿಂದ ಬ್ರಿಟಿಷರು ಸೆರೆಹಿಡಿದರು, ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿ ಮರಣದಂಡನೆ ವಿಧಿಸಿದರು. 26 ಜನವರಿ 1831 ರಂದು, ಮೂವತ್ತಮೂರನೇ ವಯಸ್ಸಿನಲ್ಲಿ ನಂದಗಡ ಗ್ರಾಮದ ಬಳಿಯ ಆಲದ ಮರಕ್ಕೆ ನೇಣು ಹಾಕಿ ಗಲ್ಲಿಗೇರಿಸಿ ಸಮಾಧಿ ಮಾಡಲಾಯಿತು. ರಾಯಣ್ಣನ ನಿಕಟವರ್ತಿ ಸಂಗೊಳ್ಳಿ ಬಿಚ್ಚುಗತ್ತಿ ಚನ್ನಬಸಪ್ಪ ರಾಯಣ್ಣನ ಸಮಾಧಿಯ ಮೇಲೆ ಆಲದ ಸಸಿ ನೆಟ್ಟಿದ್ದು ಇಂದಿಗೂ ಉಳಿದುಕೊಂಡಿದೆ.
ಹಕ್ಕಪ್ಪೊಡೆಯ- ಬುಕ್ಕಪ್ಪೊಡೆಯ(ಹಕ್ಕ ಬುಕ್ಕರು) ಕುರುಬರ ಸಂಗಮ ಬೆಡಗಿನ ವಂಶದವರಾದ ಹಕ್ಕ ಬುಕ್ಕರು ದಕ್ಷಿಣ ಭಾರತಕ್ಕೆ ದಾಳಿ ಇಟ್ಟ ದೆಹಲಿ ಸುಲ್ತಾನರನ್ನು ಹಿಮ್ಮೆಟ್ಟಿಸಿ ರಕ್ಷಿಸಿದವರು ಇಂದಿನ ಆಂಧ್ರ, ತೆಲಂಗಾಣ, ಕರ್ನಾಟಕ, ಗೋವಾ, ಕೇರಳ, ತಮಿಳುನಾಡು ರಾಜ್ಯಗಳನ್ನು ಒಳಗೊಂಡ ವಿಜಯನಗರ ಅಥವಾ ಕರ್ನಾಟಕ ಸಾಮ್ರಾಜ್ಯವನ್ನು 18 ಏಪ್ರಿಲ್ 1336
ಹಕ್ಕಪ್ಪೊಡೆಯ- ಬುಕ್ಕಪ್ಪೊಡೆಯ(ಹಕ್ಕ ಬುಕ್ಕರು) ಕುರುಬರ ಸಂಗಮ ಬೆಡಗಿನ ವಂಶದವರಾದ ಹಕ್ಕ ಬುಕ್ಕರು ದಕ್ಷಿಣ ಭಾರತಕ್ಕೆ ದಾಳಿ ಇಟ್ಟ ದೆಹಲಿ ಸುಲ್ತಾನರನ್ನು ಹಿಮ್ಮೆಟ್ಟಿಸಿ ರಕ್ಷಿಸಿದವರು ಇಂದಿನ ಆಂಧ್ರ, ತೆಲಂಗಾಣ, ಕರ್ನಾಟಕ, ಗೋವಾ, ಕೇರಳ, ತಮಿಳುನಾಡು ರಾಜ್ಯಗಳನ್ನು ಒಳಗೊಂಡ ವಿಜಯನಗರ ಅಥವಾ ಕರ್ನಾಟಕ ಸಾಮ್ರಾಜ್ಯವನ್ನು 18 ಏಪ್ರಿಲ್ 1336 ರಂದು ಸ್ವಾತಂತ್ರ್ಯ ಸಾಮ್ರಾಜ್ಯವೆಂದು ಘೋಷಿಸಿಕೊಂಡರು. ಬೀರದೇವರು (ವಿರೂಪಾಕ್ಷ) ಮನೆ ದೇವರಾದರೆ ರೇವಣಸಿದ್ದೇಶ್ವರು ಮನೆಯ ಗುರುಗಳು ಆಗಿದ್ದಾರೆ. ಆಂಧ್ರದ ಕಾಕತೀಯರ ವಾರಂಗಲ್ಲಿನಲ್ಲಿ ಕೋಶಾಧಿಕಾರಿಗಳಾಗಿ ಇದ್ದರು. ಮಹಮ್ಮದ್ ಭಿನ್ ತುಗಲಕ್ ವಾರಂಗಲ್ಲನ್ನು ವಶಪಡಿಸಿಕೊಂಡ ನಂತರ ಹಕ್ಕ ಬುಕ್ಕ ಸಹೋದರರು ಅಲ್ಲಿಂದ ಬಿಟ್ಟು ಆನೆಗುಂದಿಗೆ ಬಂದರು. ಹತಾಶರಾಗಿ ಮಲಗಿದ್ದಾಗ ರೇವಣಸಿದ್ದೇಶ್ವರರು ಕನಸಿನಲ್ಲಿ ಬಂದು ಪ್ರೇರಣೆ ನೀಡಿದ ನಂತರ ಚಾಲುಕ್ಯರ ಸಹಕಾರದಿಂದ ಹಂಪಿಯನ್ನು ಕೇಂದ್ರವಾಗಿಸಿಕೊಂಡು ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದರು. ಮುತ್ತು ರತ್ನ ವಜ್ರ ವೈಡೂರ್ಯ ಮಾರಾಟದ ವ್ಯವಹಾರಿಕ ಕೇಂದ್ರವಾಗಿ ಜಗತ್ತಿನ ಅತ್ಯಂತ ಶ್ರೀಮಂತ ಸಾಮ್ರಾಜ್ಯವಾಗಿ ಬೆಳೆದು ಇತಿಹಾಸವಾಯಿತು. ಕಂಚಿ, ಶ್ರೀರಂಗಂ, ನಂಜನಗೂಡು ಕ್ಷೇತ್ರಗಳಲ್ಲದೆ ಹಲವಾರು ಕ್ಷೇತ್ರಗಳ ಮೇಲಿನ ಆಕ್ರಮಣವನ್ನು ತಡೆದು ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿದ ಮತ್ತು ಬೆಳೆಸಿದ ಕೀರ್ತಿ ಹಕ್ಕ ಬುಕ್ಕರದಾಗಿದೆ. ಶೈವ ಸಂಸ್ಕೃತಿ ಮತ್ತು ಕನ್ನಡಿಗರ ಕೇಂದ್ರವಾಗಿ ಪ್ರಾರಂಭವಾದ ಸಾಮ್ರಾಜ್ಯವು ಕೃಷ್ಣದೇವರಾಯರ ಕಾಲದ ನಂತರ ತೆಲುಗು ಭಾಷಿಕರ ಮತ್ತು ವೈಷ್ಣವ ಸಂಪ್ರದಾಯದ ಪ್ರಾಬಲ್ಯದಿಂದಾಗಿ ಸ್ಥಳೀಯರು ನಿರಾಸೆಗೊಂಡರು. ತಾಳಿಕೋಟೆ ಯುದ್ಧದಲ್ಲಿ ಕನ್ನಡಿಗರು ಮತ್ತು ಸ್ಥಳೀಯರು ಉತ್ಸಾಹದಿಂದ ಯುದ್ಧ ಮಾಡದ ಕಾರಣ ಸೋಲಾಯಿತು. ಮತ್ತು ವಿಜಯನಗರ ಪರಕೀಯರ ದಾಳಿಗೆ ತುತ್ತಾಗಿ ದೋಚಲ್ಪಟ್ಟಿತು ಎಂದು ಕೆಲ ಇತಿಹಾಸಕಾರರು ಹೇಳುತ್ತಾರೆ.