ಬೀರೋಬ, ಬೀರಲಿಂಗೇಶ್ವರ, ಕರಿಸಿದ್ದ, ವಿರೂಪಾಕ್ಷ, ಭೈರವ, ಕೆಂಚಲಿಂಗೇಶ್ವರ ಹೀಗೆ ನೂರಾರು ಹೆಸರುಗಳಿಂದ ಕರೆಯಲ್ಪಡುವ ಬೀರದೇವರು ಶಿವನ ಅವತಾರ. ಬ್ರಹ್ಮ ಸರಸ್ವತಿಯ ಸುಪುತ್ರ. ಲೋಕದಲ್ಲಿ ಹಾಲುಮತ ಧರ್ಮವನ್ನು ಸ್ಥಾಪಿಸಲು ಅವತರಿಸಿದ. (ಜಗತ್ತಿನ ಮೊದಲ ಧರ್ಮ ಹಾಲುಮತ. ಮಾತೆಯು ದೇವರ ಪ್ರತಿಕ. ಮಾತೆಯ ಪ್ರೇಮ ದೇವರ ಪ್ರೇಮದಂತೆ.
ಬೀರೋಬ, ಬೀರಲಿಂಗೇಶ್ವರ, ಕರಿಸಿದ್ದ, ವಿರೂಪಾಕ್ಷ, ಭೈರವ, ಕೆಂಚಲಿಂಗೇಶ್ವರ ಹೀಗೆ ನೂರಾರು ಹೆಸರುಗಳಿಂದ ಕರೆಯಲ್ಪಡುವ ಬೀರದೇವರು ಶಿವನ ಅವತಾರ. ಬ್ರಹ್ಮ ಸರಸ್ವತಿಯ ಸುಪುತ್ರ. ಲೋಕದಲ್ಲಿ ಹಾಲುಮತ ಧರ್ಮವನ್ನು ಸ್ಥಾಪಿಸಲು ಅವತರಿಸಿದ. (ಜಗತ್ತಿನ ಮೊದಲ ಧರ್ಮ ಹಾಲುಮತ. ಮಾತೆಯು ದೇವರ ಪ್ರತಿಕ. ಮಾತೆಯ ಪ್ರೇಮ ದೇವರ ಪ್ರೇಮದಂತೆ. ಹಾಗಾಗಿ ತಾಯಿಯ ನಿಷ್ಕಲ್ಮಶ ಹೃದಯದ ರೀತಿಯಲ್ಲಿ ಪ್ರತಿಯೊಬ್ಬ ಮನುಷ್ಯನು ಪ್ರತಿಯೊಂದು ಜೀವಿಗಳಲ್ಲಿ ನಿಷ್ಕಲ್ಮಶ ಪ್ರೇಮವನ್ನು ಹೊಂದಿರಬೇಕೆಂಬುದೇ ಹಾಲುಮತ ಧರ್ಮದ ತಿರುಳಾಗಿದೆ.) ಸರಸ್ವತಿಯ ಅಣ್ಣ ನಾರಾಯಣನು ಬೀರದೇವರನ್ನು ಗರ್ಭದಲ್ಲಿದ್ದಾಗಲೇ ಸಂಹಾರ ಮಾಡಲು ಪ್ರಯತ್ನಿಸಿದನು, ಬಾಣಂತಿಯರಿಂದ ಸಾಯಿಸಲು ಪ್ರಯತ್ನಿಸಿದನು. ನಂತರ ಈ ಮಗುವು ಅಪಶಕುನ, ಲೋಕಕ್ಕೆ ಕಂಟಕವೆಂದು ನಂಬಿಸಿ ಅರಣ್ಯಕ್ಕೆ ಕೊಂಡೊಯ್ದು ಸಾಯಿಸಲು ಪ್ರಯತ್ನಿಸಿದರು. ಮಗುವನ್ನು ಸಾಯಿಸಲು ಮನಸ್ಸಾಗದ ರಾಜಭಟರು ಅರಣ್ಯದಲ್ಲಿಯೇ ಮಗುವನ್ನು ಬಿಟ್ಟು ಬಂದರು. ಅರಣ್ಯದವಾಸಿಯಾಗಿದ್ದ ಚಿಂಚಲಿ ಮಾಯಮ್ಮಳು ಬೀರದೇವರನ್ನು ಸಾಕಿದಳು. ರಾಜನಾಗಿ, ರಾಜ ಯೋಗಿಯಾಗಿ, ಕುರಿಗಳನ್ನು ಕಾಯುವ ಕಾಯಕಯೋಗಿಯಾಗಿ, ಲೋಕ ಸಂಚಾರಮಾಡುತ್ತಾ ಧರ್ಮಭೋದನೆಯನ್ನು ಮಾಡಿದನು. ಲೋಕ ಕಂಠಕರಾದ ಕೋಣಾಸುರ ಡೊಳ್ಳಾಸುರ ಇತರೆ ರಾಕ್ಷಸರನ್ನು ಸಂಹಾರ ಮಾಡಿದನು. ಕನ್ನೆಕೋಮಲೆ ಬೀರದೇವರ ಪತ್ನಿಯಾಗಿದ್ದಾಳೆ. ಬೀರದೇವರ ಇತಿಹಾಸ ಕ್ರಿಸ್ತಪೂರ್ವ ಮೂರರಿಂದ ಸಿಗುತ್ತದೆಂದು ಸಂಶೋಧಕರು ಹೇಳುತ್ತಾರೆ. ಬೀರದೇವರನ್ನು ಲಕ್ಕಿ ಪತ್ರೆ, ಬಂಡಾರ, ಕಂಬಳಿ, ಡೊಳ್ಳುಗಳ ಮೂಲಕ ಪೂಜಿಸುತ್ತಾರೆ. ಬೀರದೇವರನ್ನು ಬೀರಪ್ಪ, ಬೀರೋಬ, ಬೀರಲಿಂಗೇಶ್ವರ, ವೀರಭದ್ರ, ಭೈರವ, ಈರಣ್ಣ, ಕರಿ ಸಿದ್ದೇಶ್ವರ, ಶಿವಸಿದ್ಧ, ಬೀರಲಿಂಗೇಶ್ವರ, ವಿರೂಪಾಕ್ಷ ಹೀಗೆ ನೂರಾರು ಹೆಸರುಗಳಿಂದ ಪೂಚಿಸುತ್ತಾರೆ.
12ನೇ ಶತಮಾನದಲ್ಲಿ ಇದ್ದ ರಾಜಯೋಗಿ, ಸಿದ್ದ ಪುರುಷ, ಶಿವಯೋಗಿ ಶ್ರೀ ಸಿದ್ದರಾಮೇಶ್ವರರು. ಶ್ರೀ ರೇವಣಸಿದ್ದೇಶ್ವರರು ತಾಯಿಯ ಗರ್ಭಕ್ಕೆ ದೀಕ್ಷೆ ಕೊಟ್ಟು, ಈತನು ಮಹಾ ಸಿದ್ಧಪುರುಷನಾಗುವನೆಂದು ಆಶೀರ್ವಾದ ಮಾಡಿದನು. ಬಾಲಕನಿದ್ದಾಗಲೇ ಕುರಿ ಕಾಯುತ್ತಾ ಶಿವ ಪ್ರೇಮವನ್ನು ಬೆಳೆಸಿಕೊಂಡಿದ್ದನು.
12ನೇ ಶತಮಾನದಲ್ಲಿ ಇದ್ದ ರಾಜಯೋಗಿ, ಸಿದ್ದ ಪುರುಷ, ಶಿವಯೋಗಿ ಶ್ರೀ ಸಿದ್ದರಾಮೇಶ್ವರರು. ಶ್ರೀ ರೇವಣಸಿದ್ದೇಶ್ವರರು ತಾಯಿಯ ಗರ್ಭಕ್ಕೆ ದೀಕ್ಷೆ ಕೊಟ್ಟು, ಈತನು ಮಹಾ ಸಿದ್ಧಪುರುಷನಾಗುವನೆಂದು ಆಶೀರ್ವಾದ ಮಾಡಿದನು. ಬಾಲಕನಿದ್ದಾಗಲೇ ಕುರಿ ಕಾಯುತ್ತಾ ಶಿವ ಪ್ರೇಮವನ್ನು ಬೆಳೆಸಿಕೊಂಡಿದ್ದನು. ಧೂಳಿ ಮಾಂಕಾಳ ಈತನ ಮೊದಲ ಹೆಸರು. ಕುರಿ ಕಾಯುತ್ತಾ ಇರುವಾಗ ಬಾಲಕನಲ್ಲಿಗೆ ಆಗಮಿಸಿದ ಮಲ್ಲಯ್ಯ ಎಂಬುವವನು ಅಂಬಲಿಯನ್ನು ಕೇಳಿದನು. ಅಂಬಲಿಯನ್ನು ತರಲು ಮನೆಗೆ ಹೋಗಿ ಹಿಂದಿರುಗಿದಾಗ ಮಲ್ಲಯ್ಯನ ಇಲ್ಲದಿರುವುದನ್ನು ಕಂಡು ಹುಡುಕುತ್ತಾ ಶ್ರೀಶೈಲಕ್ಕೆ ಬಂದನು. ಮಲ್ಲಯ್ಯನಿಗೆ ಅಂಬಲಿಯನ್ನು ಕುಡಿಸಬೇಕು ಎಂದು ಪ್ರಯತ್ನಿಸಿ ಸೋತನು. ನಿರಾಶನಾದ ಹುಡುಗನು ಶ್ರೀಶೈಲಲ್ಲಿ ಇರುವ ಕಮರಿ ಕೊಳ್ಳಕ್ಕೆ ಸಾಯಲು ಹಾರಿದನು. ಶಿವನು ಇವನ ಮುಗ್ದ ಭಕ್ತಿಗೆ ಮೆಚ್ಚಿ ಬಾಲಕನ ಕೈ ಹಿಡಿದು ರಕ್ಷಿಸಿದನು. ಶಿವನ ದರ್ಶನ ಆಶೀರ್ವದ ಪಡೆದ ಮಗು ಮುಂದೆ ಸಕಲ ಯೋಗ ಸಿದ್ದ ಸಾಧಕನಾದನು. ಸಿದ್ಧ ಪರಂಪರೆಯ ಸಿದ್ದರಾಮನು ಲೋಕಕಲ್ಯಾಣಕ್ಕಾಗಿ ಅನ್ನ ದಾಸೋಹ ಮಾಡುತ್ತಾ, ಕೆರೆಕಟ್ಟೆ ಬಾವಿಗಳನ್ನು ನಿರ್ಮಿಸುತ್ತಾ, ಗಿಡಮರಗಳನ್ನು ಬೆಳೆಸುತ್ತಾ ಇದ್ದನು. ಅಲ್ಲಮಪ್ರಭುವಿನ ಸಂಪರ್ಕದಿಂದ ಹಾಗೂ ರೇವಣಸಿದ್ದೇಶ್ವರರ ನಿರ್ದೇಶನದ ಮೇರೆಗೆ ಶರಣರ ರಕ್ಷಣೆಗೆ ನಿಂತನು ಎಂಬ ಇತಿಹಾಸವಿದೆ. ಇವನ ಪರಂಪರೆಯ ಭಕ್ತರ ಜಾತ ಕರ್ಮ ವಿಧಿಗಳನ್ನು ನಡೆಸವವರಿಗೆ ಮಂಕ ಒಡೆಯರು ಎಂದು ಕರೆಯುತ್ತಾರೆ. ಶರಣ ಚಳುವಳಿಯಲ್ಲಿ ಪ್ರಮುಖನಾದ ಸಿದ್ದರಾಮನು ಹಲವಾರು ವಚನಗಳನ್ನು ಬರೆದಿದ್ದಾರೆ.
ರಾಜನ ಮಗಳಾಗಿ ಜನಿಸಿದ ಮಾಯಮ್ಮಳು, ವಿಚಿತ್ರವಾಗಿ ಬೆಳೆಯುವುದನ್ನು ಗಮನಿಸಿದ ರಾಜನು ಲೋಕಕ್ಕೆ ಹೆದರಿ ಮಗಳನ್ನು ಅಡವಿಗೆ ಬಿಟ್ಟುಬರುತ್ತಾನೆ. ಕಾಡಿನಲ್ಲಿ ಕುರಿಗಳನ್ನು ಕಾಯುತ್ತಾ ಏಕಾಂಗಿಯಾಗಿ ಎಲ್ಲಾ ಯೋಗವಿದ್ಯೆಗಳನ್ನು ಕಲಿತುಕೊಳ್ಳುತ್ತಾಳೆ. . ರಾಜನಿಗೆ ಹುಟ್ಟಿದ ಮತ್ತೂಂದು ಹೆಣ್ಣು ಮಗಳು ಅಕ್ಕಮ್ಮಳು, ತನ್ನ ಅಕ್ಕ ಬೇಕೆಂದು ತಂದೆ ತಾಯಿಯನ್ನು ಬಿಟ್ಟು ಕಾಡಿನಲ್ಲಿರುವ ಅಕ್ಕ ಮಾಯಮ್ಮಳನ್ನು ಸೇರಿಕೊಳ್ಳುತ್ತಾಳೆ. ಹೀಗೆ ರಾಜನಿಗೆ ಹುಟ್ಟಿದ ಇನ್ನೂ ಐದು ಮಕ್ಕಳು ಸಹ ಅರಮನೆಯನ್ನು ತೊರೆದು ಅಕ್ಕನ ಜೊತೆ ಇರಲು ಬಯಸಿ ಅಡವಿ ಸೇರುತ್ತಾರೆ.
ರಾಜನ ಮಗಳಾಗಿ ಜನಿಸಿದ ಮಾಯಮ್ಮಳು, ವಿಚಿತ್ರವಾಗಿ ಬೆಳೆಯುವುದನ್ನು ಗಮನಿಸಿದ ರಾಜನು ಲೋಕಕ್ಕೆ ಹೆದರಿ ಮಗಳನ್ನು ಅಡವಿಗೆ ಬಿಟ್ಟುಬರುತ್ತಾನೆ. ಕಾಡಿನಲ್ಲಿ ಕುರಿಗಳನ್ನು ಕಾಯುತ್ತಾ ಏಕಾಂಗಿಯಾಗಿ ಎಲ್ಲಾ ಯೋಗವಿದ್ಯೆಗಳನ್ನು ಕಲಿತುಕೊಳ್ಳುತ್ತಾಳೆ. . ರಾಜನಿಗೆ ಹುಟ್ಟಿದ ಮತ್ತೂಂದು ಹೆಣ್ಣು ಮಗಳು ಅಕ್ಕಮ್ಮಳು, ತನ್ನ ಅಕ್ಕ ಬೇಕೆಂದು ತಂದೆ ತಾಯಿಯನ್ನು ಬಿಟ್ಟು ಕಾಡಿನಲ್ಲಿರುವ ಅಕ್ಕ ಮಾಯಮ್ಮಳನ್ನು ಸೇರಿಕೊಳ್ಳುತ್ತಾಳೆ. ಹೀಗೆ ರಾಜನಿಗೆ ಹುಟ್ಟಿದ ಇನ್ನೂ ಐದು ಮಕ್ಕಳು ಸಹ ಅರಮನೆಯನ್ನು ತೊರೆದು ಅಕ್ಕನ ಜೊತೆ ಇರಲು ಬಯಸಿ ಅಡವಿ ಸೇರುತ್ತಾರೆ. ಕುರಿಕಾಯುತ್ತಾ ಎಲ್ಲರೂ ಯೋಗ ಧ್ಯಾನ ವಿದ್ಯೆಗಳಲ್ಲಿ ಪಾರಂಗತರಾಗುತ್ತಾರೆ. ಇವರನ್ನು ಸಪ್ತ ಮಾತೃಕೆಯರು ಎಂದು ಕರೆಯುತ್ತಾರೆ. ಬೀರದೇವರ ಜನನವು ರಾಜ್ಯಕ್ಕೆ ಮತ್ತು ತಂದೆ ತಾಯಿಗೆ ಅಪಶಕುನವೆಂದು ನಾರಾಯಣನು ಹೇಳಿದ ಮಾತನ್ನು ನಂಬಿ ತಂದೆ ತಾಯಿ ಬೀರದೇವರನ್ನು ಅಡವಿಗೆ ಬಿಟ್ಟು ಬರಲು ಹೇಳಿರುತ್ತಾರೆ. ಕಾಡಿನಲ್ಲಿ ಮಗು ಅಳುವ ಧ್ವನಿ ಆಲಿಸಿ ಏಳು ಜನ ಅಕ್ಕ-ತಂಗಿಯರು ಓಡೋಡಿ ಬರುತ್ತಾರೆ. ಆ ಮಗುವನ್ನು ಅಡವಿಯ ಎಲ್ಲಾ ಪ್ರಾಣಿ ಪಕ್ಷಿ ಜೀವಿಗಳು ಹಾರೈಕೆ ಮಾಡುತ್ತಿರುವುದನ್ನು ಗಮನಿಸಿ ಆಶ್ಚರ್ಯ ಪಡುತ್ತಾರೆ. ಆ ಮಗುವಿಗೆ ತಾಯಿಯಾಗಬೇಕೆಂದು ಪರಸ್ಪರರಲ್ಲಿ ಜಗಳವಾಗುತ್ತದೆ. ಕೊನೆಗೆ ಮಾತೃ ಪ್ರೇಮದ ಭಾವನೆಯನ್ನು ಹೊಂದಿದ್ದ ಮಾಯಮ್ಮಳ ಎದೆಯಲ್ಲಿ ಹಾಲು ಬರುತ್ತದೆ. ಇದನ್ನು ಗಮನಿಸಿ ಎಲ್ಲಾ ಸಹೋದರಿಯರು ಮಾಯಮ್ಮಳಿಗೆ ಮಗುವನ್ನು ಅರ್ಪಿಸಿ ಸಮಾಧಾನ ಪಡುತ್ತಾರೆ. ಮುಂದೆ ಮಾಯಮ್ಮಳು ಬೀರದೇವರಿಗೆ ಸಾಕು ತಾಯಿಯಾಗಿ ಶಸ್ತ್ರ ವಿದ್ಯೆ, ಯೋಗವಿದ್ಯೆ, 64 ವಿದ್ಯೆಗಳನ್ನು ಕಲಿಯಲು ಕಲಿಸುತ್ತಾಳೆ ಲೋಕಕಂಠಕರಾದ ರಾಕ್ಷಸರನ್ನು ಸಂಹರಿಸಿ ಧರ್ಮ ಸಂಸ್ಥಾಪನೆಗೆ ಬೀರದೇವರಿಗೆ ನೆರವಾಗುತ್ತಾಳೆ. ಮಾಯಮ್ಮ ಇಂದಿಗೂ ಪ್ರಸಿದ್ಧ ಕ್ಷೇತ್ರವಾದ ಚಿಂಚಲಿಯಲ್ಲಿ ಭಕ್ತರಿಂದ ಪೂಜಿಸಿಕೊಳ್ಳುತ್ತಾಳೆ
ಜನರ ಮಾತಿನಲ್ಲಿ ಭರಮದೇವ - ಸುರಾವತಿ ಎಂದು ಕರೆಯಲ್ಪಟ್ಟು ಪೂಜಿಸಲ್ಪಡುವ ದೇವರು. ಸೃಷ್ಟಿಯ ಅಧಿದೇವತೆಯಾದ ಬ್ರಹ್ಮನು ಮತ್ತು ವಿದ್ಯೆಯ ಅಧಿದೇವತೆಯಾದ ಸರಸ್ವತಿಯ ಪೂಜೆಯನ್ನು ಹಾಲುಮತ ಧರ್ಮದಲ್ಲಿ ಸಹಸ್ರಾರು ವರ್ಷಗಳಿಂದ ಮಾಡಲಾಗುತ್ತಿದೆ. ಶಿವಪೂಜೆಯಲ್ಲಿ ನಿರತನಾಗಿದ್ದ ಬ್ರಹ್ಮನಿಗೆ ಬಹಳ ವರ್ಷಗಳ ಕಾಲ ಬದಲಾಗಿರುವುದಿಲ್ಲ.
ಜನರ ಮಾತಿನಲ್ಲಿ ಭರಮದೇವ - ಸುರಾವತಿ ಎಂದು ಕರೆಯಲ್ಪಟ್ಟು ಪೂಜಿಸಲ್ಪಡುವ ದೇವರು. ಸೃಷ್ಟಿಯ ಅಧಿದೇವತೆಯಾದ ಬ್ರಹ್ಮನು ಮತ್ತು ವಿದ್ಯೆಯ ಅಧಿದೇವತೆಯಾದ ಸರಸ್ವತಿಯ ಪೂಜೆಯನ್ನು ಹಾಲುಮತ ಧರ್ಮದಲ್ಲಿ ಸಹಸ್ರಾರು ವರ್ಷಗಳಿಂದ ಮಾಡಲಾಗುತ್ತಿದೆ. ಶಿವಪೂಜೆಯಲ್ಲಿ ನಿರತನಾಗಿದ್ದ ಬ್ರಹ್ಮನಿಗೆ ಬಹಳ ವರ್ಷಗಳ ಕಾಲ ಬದಲಾಗಿರುವುದಿಲ್ಲ. ಶಿವನ ಅವಕೃಪೆಗೆ ಬ್ರಹ್ಮನು ಒಳಗಾಗುವಂತೆ ಮಾಡಲು ನಾರಾಯಣನು ಹಲವು ಬಾರಿ ಪ್ರಯತ್ನಿಸಿದನು ಎಂದು ಹೇಳಲಾಗುತ್ತದೆ. ಮಕ್ಕಳಿಲ್ಲದವರು ಶಿವ ಪೂಜೆಯನ್ನು ಮಾಡಬಾರದೆಂದು ನಾರಾಯಣನು ಅವಮಾನಿಸುತ್ತಾನೆ. ಬ್ರಹ್ಮ ಸರಸ್ವತಿಯ ಬೇಡಿಕೆಯ ಮೇರೆಗೆ, ಶಿವನೇ ಬೀರದೇವರ ಅವತಾರವನ್ನು ಪಡೆದು, ಲೋಕದಲ್ಲಿ ಸಿದ್ದ ಪರಂಪರೆಯ ಹಾಲುಮತ ಧರ್ಮವನ್ನು ಸ್ಥಾಪಿಸಿದನೆಂದು ಪ್ರತೀತಿಯಿದೆ. ಶಿವನ ಆಶೀರ್ವಾದದಿಂದ ಸರಸ್ವತಿಯು ಗರ್ಭವತಿಯಾದದ್ದನ್ನು ಸಹಿಸದೇ ನಾರಾಯಣನು ಮಗುವನ್ನು ಕೊಲ್ಲಲು ಹಲವು ಬಾರಿ ಪ್ರಯತ್ನಿಸಿ ವಿಫಲನಾಗುತ್ತಾನೆ.
ಲೋಕಕಂಟಕರಾಗಿದ್ದ ಮಣಿಸುರ, ಮಲ್ಲಾಸುರರೆಂಬ ರಾಕ್ಷಸರನ್ನು ನಿಗ್ರಹಿಸಲು ಮತ್ತು ಧರ್ಮವನ್ನು ಸ್ಥಾಪಿಸಲು ಶಿವನೇ ಮೈಲಾರಲಿಂಗ ಎಂಬ ಹೆಸರಿನಲ್ಲಿ ಜನಿಸಿದನೆಂದು ಪ್ರತೀತಿ. ಶಿವನ ನಂತರ ಎಲ್ಲಾ ಜಾತಿ ಧರ್ಮದವರಿಂದ ಪೂಜಿಸಿಕೊಳ್ಳುವ ಏಕೈಕ ದೇವರು ಮೈಲಾರಲಿಂಗನು. ಕಪಿಲಸಿದ್ಧನೆಂಬ ಮುನಿಯ ಮೈಲಾರಲಿಂಗನೆಂದು ಹೆಸರು ಪಡೆದನೆಂಬ ನಂಬಿಕೆ ಇದೆ.
ಲೋಕಕಂಟಕರಾಗಿದ್ದ ಮಣಿಸುರ, ಮಲ್ಲಾಸುರರೆಂಬ ರಾಕ್ಷಸರನ್ನು ನಿಗ್ರಹಿಸಲು ಮತ್ತು ಧರ್ಮವನ್ನು ಸ್ಥಾಪಿಸಲು ಶಿವನೇ ಮೈಲಾರಲಿಂಗ ಎಂಬ ಹೆಸರಿನಲ್ಲಿ ಜನಿಸಿದನೆಂದು ಪ್ರತೀತಿ. ಶಿವನ ನಂತರ ಎಲ್ಲಾ ಜಾತಿ ಧರ್ಮದವರಿಂದ ಪೂಜಿಸಿಕೊಳ್ಳುವ ಏಕೈಕ ದೇವರು ಮೈಲಾರಲಿಂಗನು. ಕಪಿಲಸಿದ್ಧನೆಂಬ ಮುನಿಯ ಮೈಲಾರಲಿಂಗನೆಂದು ಹೆಸರು ಪಡೆದನೆಂಬ ನಂಬಿಕೆ ಇದೆ. ಶಿವಸಿದ್ಧ ಮತ್ತು ನಾಥ ಪಂಥದವರ ಮೂಲಿಗರ ದೇವರು. ಮಹರಾಷ್ಟ್ರದ ಜೆಜೂರಿ, ಹಡಗಲಿ ಮೈಲಾರ, ರಾಣೇಬೆನ್ನೂರು ಮೈಲಾರ, ಶ್ರೀಶೈಲ ಮಲ್ಲಯ್ಯ, ಯಾದಗಿರಿ ಮಲ್ಲಯ್ಯ, ಬೀದರ್ ಮಲ್ಲಯ್ಯ, ಗುಡ್ಡದ ಮಲ್ಲಯ್ಯ (ಆಂಧ್ರ), ಮಲೈಮಾದೇಶ್ವರ, ಮುಡುಕುತೊರೆ ಮಲ್ಲಯ್ಯ ಇಂತಹ ಪ್ರಸಿದ್ಧ ಕ್ಷೇತ್ರಗಳಲ್ಲದೆ ಸಹಸ್ರಾರು ಭಾಗದಲ್ಲಿ ಮಲ್ಲಯ್ಯನ ದೇವಸ್ಥಾನಗಳನ್ನು ನೋಡಬಹುದು.. ಮಲ್ಲಯ್ಯನು ಪ್ರಧಾನವಾಗಿ ಹಾಲುಮತ ಧರ್ಮದವರ ಆರಾಧ್ಯದೈವರಾಗಿದ್ದರೂ ಸಹ ಜೈನ, ಇಸ್ಲಾಂ, ಲಿಂಗಾಯಿತ, ವೀರಶೈವ ಪರಂಪರೆಯವರೂ ಆರಾಧಿಸುವುದನ್ನು ಕಾಣಬಹುದು. ಜಾತಿಭೇದ ಇಲ್ಲದೆ ಎಲ್ಲಾ ವರ್ಗದವರು ಆರಾಧಿಸುವದು ಮೈಲಾರಲಿಂಗನ ವಿಶೇಷವಾಗಿದೆ. ದೇವಾನುದೇವತೆಗಳೂ ಸೋಲಿಸಲಾಗದ ಮಣಿಕಾಸುರ, ಮಲ್ಲಾಸುರರನ್ನು ತ್ರಿಮೂರ್ತಿಗಳು ಒಟ್ಟಾಗಿ ಮಾರ್ತಾಂಡ ಭೈರವ (ಗೊರವಯ್ಯ, ವಗ್ಗೆ)ರೂಪದಲ್ಲಿ ಅವತರಿಸಿ ಸಂಹರಿಸುತ್ತಾನೆ. ದುಷ್ಟಸಂಹಾರದಲ್ಲಿ ಸಹಕರಿಸಿದ ದೇವಿಯನ್ನು ಘೃತಮಾರಿ ಎಂದು ಕರೆಯಲಾಗುತ್ತದೆ. ಅಸುರರ ಸಂಹಾರದ ಸಂಕೇತವಾಗಿ ದಸರಾದಲ್ಲಿ 9 ದಿನಗಳ ಜಾತ್ರೆ ನಡೆಯುತ್ತದೆ. ಕೊನೆಯ ದಿನ ಹೇಳಿಕೆ (ಭವಿಷ್ಯ) ಹೇಳುವ ಸಂಪ್ರದಾಯವಿದೆ. ತ್ರಿಶೂಲ, ಡಮರು, ಡೊಳ್ಳು, ಬಂಡಾರ, ಕಂಬಳಿ, ಕವಡೆಯ ಮಾಲೆ ಇವು ಮೈಲಾರಲಿಂಗನ ವೇಷವಾಗಿವೆ. ಗೊರವಯ್ಯನವರು ಕಂಬಳಿಯ ಪೊಶಾಕು ಧರಿಸಿ ನಾಡಿನಾತ್ಯಂತ ಬರಿಗಾಲಿನಲ್ಲಿ ಸಂಚರಿಸುತ್ತಾರೆ. ತಿರುಪತಿ ತಿಮ್ಮಪ್ಪನು ಮಲ್ಲಯ್ಯನ ಏಳು ಕೋಟಿ ಸಾಲವನ್ನು ಪಡೆದು ತೀರಿಸಲಾಗದ ಕಾರಣ ತಿಮ್ಮಪ್ಪನ ಮಗಳನ್ನು ಮೈಲಾರಲಿಂಗನು ಮದುವೆ ಮಾಡಿಕೊಳ್ಳುತ್ತಾನೆ. ಗಂಗೆ ಮಾಳಮ್ಮ ಮತ್ತು ಕುರುಬತ್ತೆಮ್ಮ ಎಂಬ ಪತ್ನಿಯರು ಮಲ್ಲಯ್ಯನಿಗೆ. ಏಳು ಕೋಟಿ ಏಳು ಕೋಟಿ ಉಘೇ ಎಂಬುದು ಮೈಲಾರಲಿಂಗದೇವರ ಘೋಷ ಮಂತ್ರವಾಗಿದೆ.